ಫಗ್ವಾರ: ಡ್ರಗ್ ಪೆಡ್ಲರ್ನನ್ನು ಪೊಲೀಸರ ವಶದಿಂದ ಬಿಡುಗಡೆಗೊಳಿಸಲು ಅವನ ಕುಟುಂಬದಿಂದ ಹಣ ಪಡೆದ ಆರೋಪದ ಮೇಲೆ ಪಂಜಾಬ್ನಲ್ಲಿ ನಾಲ್ಕು ಜನ ಪೊಲೀಸ್ ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ಡಿಜಿಐ ನವೀನ್ ಸಿಂಗ್ಲಾ ತಿಳಿಸಿದರು.

ಫಗ್ವಾರ ಪೊಲೀಸ್ ಠಾಣೆಯ ಅಪರಾಧ ತನಿಖಾ ವಿಭಾಗ(ಸಿಐಎ)ದ ಎಸ್ಐ ಬಿಸ್ಮನ್ ಸಾಹಿ, ಎಎಸ್ಐ ಜಸ್ವಿಂದರ್ ಸಿಂಗ್, ನಿರ್ಮಲ್ ಕುಮಾರ್ ಹಾಗೂ ಹೆಡ್ ಕಾನ್ಸ್ಟೇಬಲ್ ಜಗರೂಪ್ ಸಿಂಗ್ ಅವರನ್ನು ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಶುಕ್ರವಾರ ಬಂಧಿಸಲಾಗಿದೆ ಎಂದರು.
.ರಾಜ್ಯ ಪೊಲೀಸ್ ಇಲಾಖೆಯ ಪ್ರಭಾರ ಡಿಜಿಪಿಯಾಗಿ ಎಂ.ಎ. ಸಲೀಂ ನೇಮಕ.
ಹನಿ ಎನ್ನುವ ಡ್ರಗ್ ಪೆಡ್ಲರ್ನನ್ನು ಬಿಡುಗಡೆಮಾಡಲು ಅವನ ಕುಟುಂಬದಿಂದ ₹2.5 ಲಕ್ಷ ಮೊತ್ತವನ್ನು ಆರೋಪಿಗಳು ಪಡೆದಿದ್ದಾರೆ. ಯಾವುದೇ ಕಾರಣಕ್ಕೂ ಭ್ರಷ್ಟಾಚಾರವನ್ನು ನಾವು ಸಹಿಸುವುದಿಲ್ಲ. ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ಈ ರೀತಿಯ ಘಟನೆಗಳು ಜರುಗಬಾರದು, ಹಾಗಾಗಿ ಕಠಿಣ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಆರೋಪಿಗಳನ್ನು ಫಗ್ವಾರ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ವಿಚಾರಣೆ ಮುಗಿಯುವರೆಗೆ ಅವರನ್ನು ಅಮಾನತ್ತಿನಲ್ಲಿಡಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.