ನವದೆಹಲಿ (ಪಿಟಿಐ): ರವೀಂದ್ರನಾಥ ಟ್ಯಾಗೋರ್ ಅವರ ಕಲಾಕೃತಿ ‘ಫ್ರಮ್ ಅಕ್ರಾಸ್ ದ ಡಾರ್ಕ್’ ಹರಾಜೊಂದರಲ್ಲಿ ₹10.73 ಕೋಟಿಗೆ ಮಾರಾಟವಾಗಿದೆ.

ಡಿಸೆಂಬರ್ 14ರಿಂದ 17ರವರೆಗೆ ‘ಅಸ್ತಗುರು’ ಆಯೋಜಿಸಿದ್ದ ಹರಾಜಿನಲ್ಲಿ ₹163.65 ಕೋಟಿ ಮೌಲ್ಯದ 87 ವಸ್ತುಗಳು ಮಾರಾಟವಾಗಿವೆ. ತೈಯಬ್ ಮೆಹ್ತಾ ಅವರ, ‘ಅನ್ಟೈಟಲ್ಡ್ (ಗೆಸ್ಚರ್)’ ಕಲಾಕೃತಿ ₹53.54 ಕೋಟಿಗೆ ಮಾರಾಟವಾಗಿದೆ.

‘ಟ್ಯಾಗೋರ್ ಅವರು 1937ರಲ್ಲಿ ರಚಿಸಿದ್ದ ಕಲಾಕೃತಿಯು ಕತ್ತಲೆ–ಬೆಳಕು ಮತ್ತು ನೋವು ನಲಿವುಗಳ ಅದ್ಭುತ ಸಮ್ಮಿಲನವಾಗಿದೆ’ ಎಂದು ಹರಾಜು ಸಮಿತಿ ತಿಳಿಸಿದೆ.

ಕೃಷನ್ ಖನ್ನಾ ಅವರ ‘ದ ಲಾಸ್ಟ್ ಸೂಪರ್’ ಕಲಾಕೃತಿಯು ₹10.22 ಕೋಟಿಗೂ ಅಧಿಕ ಮೊತ್ತಕ್ಕೆ ಮಾರಾಟವಾಗಿದೆ. ಬಕ್ರೆ ಅವರ ‘ಮೋನಾಲಿಸಾ’ ₹2.30 ಕೋಟಿಗೆ ಮಾರಾಟವಾಗುವ ಮೂಲಕ ವಿಶ್ವದಾಖಲೆಯನ್ನು ಮಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.