ನವದೆಹಲಿ:‘ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ರಹಸ್ಯ ಕಡತಗಳು ರಕ್ಷಣಾ ಸಚಿವಾಲಯದ ಕಚೇರಿಯಿಂದ ಕಳವಾಗಿಲ್ಲ’ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಹೇಳಿದ್ದಾರೆ.

‘ಸಚಿವಾಲಯದ ಕಚೇರಿಯಿಂದ ಕಡತಗಳು ಕಳವಾಗಿವೆ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಇದು ಸಂಪೂರ್ಣ ತಪ್ಪು. ರಹಸ್ಯ ಕಡತಗಳ ‘ಜೆರಾಕ್ಸ್’ ಪ್ರತಿಯನ್ನು ಅರ್ಜಿದಾರರು ಬಳಸುತ್ತಿದ್ದಾರೆ ಎಂಬರ್ಥದಲ್ಲಿ ನಾನು ಆ ಮಾತು ಹೇಳಿದ್ದೆ’ ಎಂದು ವೇಣುಗೋಪಾಲ್ ಹೇಳಿದ್ದಾರೆ.

ರಫೇಲ್ ಕಡತಗಳು ಕಳವಾಗಿವೆ. ಆ ಕಡತಗಳನ್ನು ಆಧರಿಸಿ ವರದಿ ಪ್ರಕಟಿಸುತ್ತಿರುವ ದ ಹಿಂದೂ ಪತ್ರಿಕೆ ವಿರುದ್ಧ ಅಧಿಕೃತ ರಹಸ್ಯಗಳ ಕಾಯ್ದೆ ಅಡಿ ಪ್ರಕರಣ ದಾಖಲಿಸಲು ಚಿಂತನೆ ನಡೆಸಲಾಗಿದೆ ಎಂದು ಅವರು ಸುಪ್ರೀಂ ಕೋರ್ಟ್‌ನಲ್ಲಿ ಅವರು ಬುಧವಾರ ಹೇಳಿದ್ದರು.

ಈ ಹೇಳಿಕೆಯನ್ನು ಆಧರಿಸಿ ವಿರೋಧ ಪಕ್ಷಗಳು ಸರ್ಕಾರದ ಮೇಲೆ ತಿರುಗಿಬಿದ್ದಿವೆ. ದ ಹಿಂದೂ ಪತ್ರಿಕೆ ಪ್ರಕಟಿಸಿದ ವರದಿ ನಿಜವಲ್ಲವೇ ಎಂದು ವಿರೋಧ ಪಕ್ಷಗಳು ಪ್ರಶ್ನಿಸತೊಡಗಿವೆ. ಕಡತಗಳನ್ನು ಕಾಪಾಡಿಕೊಳ್ಳದವರು ದೇಶವನ್ನು ಹೇಗೆ ಕಾಪಾಡುತ್ತಾರೆ ಎಂದೂ ಲೇವಡಿ ಮಾಡುತ್ತಿವೆ.

ಅಟಾರ್ನಿ ಜನರಲ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ‘ಕಳವಾಗಿವೆ’ ಎಂಬ ಪದವನ್ನು ಬಳಸಬಾರದಿತ್ತು. ಇದರಿಂದ ಸರ್ಕಾರಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಜತೆಗೆ ಸರ್ಕಾರಕ್ಕೆ ಮುಜುಗರವೂ ಆಗುತ್ತಿದೆ ಎಂದು ಸರ್ಕಾರದ ಉನ್ನತ ಮೂಲಗಳು ಹೇಳಿವೆ.

ಗೋವಾದಲ್ಲಿ ಸರ್ಕಾರವೇ ಮಾಯವಾಗಿರುವಂತೆ, ರಫೇಲ್ ಕಡತಗಳೂ ಮಾಯವಾಗಿವೆ. ರಫೇಲ್ ಕಡತಗಳು ನನ್ನ ಬಳಿ ಇವೆ ಎಂದು ಮನೋಹರ್ ಪರ್ರೀಕರ್ ಹೇಳಿದ್ದರು. ಕಡತ ಕಳವಿನ ತನಿಖೆ ನಡೆಸುವುದಾದರೆ ಅದನ್ನು ಪರ್ರೀಕರ್ ಅವರಿಂದಲೇ ಆರಂಭಿಸಿ

-ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.