ನವದೆಹಲಿ: ದ್ವಿಪಕ್ಷೀಯ ರಕ್ಷಣಾ ಸಹಕಾರ ಹೆಚ್ಚಿಸುವ ಮಾರ್ಗಗಳ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಫ್ರೆಂಚ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲೆ ಅವರೊಂದಿಗೆ ಗುರುವಾರ ಸಂಕ್ಷಿಪ್ತವಾಗಿ ಚರ್ಚೆ ನಡೆಸಿದರು.

ಭಾರತೀಯ ವಾಯುಪಡೆಗೆ ರಫೇಲ್ ಯುದ್ಧ ವಿಮಾನಗಳು ಅಧಿಕೃತವಾಗಿ ಸೇರ್ಪಡೆಯಾಗಲಿರುವ ಸಮಾರಂಭದಲ್ಲಿ ಭಾಗವಹಿಸುವುದಕ್ಕಾಗಿ ಫ್ಲಾರೆನ್ಸ್ ಪಾರ್ಲೆ ಅವರು ದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿರುವ ಸಂದರ್ಭದಲ್ಲಿ ಈ ಮಾತುಕತೆ ನಡೆಯಿತು.

ಫ್ರೆಂಚ್ ರಕ್ಷಣಾ ಸಚಿವೆ ಪಾರ್ಲೆ ಅವರಿಗೆ ದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೌರವವನ್ನು ನೀಡಲಾಯಿತು. ಆ ನಂತರ, ರಾಜನಾಥ್ ಸಿಂಗ್ ಮತ್ತು ಪಾರ್ಲಿ ಅಂಬಾಲಾದ ವಾಯುನೆಲೆಗೆ ಪ್ರಯಾಣ ಬೆಳೆಸಿದರು.

₹59,000 ಕೋಟಿ ವೆಚ್ಚದಲ್ಲಿ ಭಾರತವು ಫ್ರಾನ್ಸ್ನಿಂದ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುತ್ತಿದ್ದು, ಈ ಪೈಕಿ 10 ಯುದ್ಧ ವಿಮಾನಗಳನ್ನು ಡಾಸೊ ಏವಿಯೇಷನ್ ಕಂಪನಿ ಹಸ್ತಾಂತರಿಸಿದೆ. ಈ ಪೈಕಿ ಐದು ಯುದ್ಧ ವಿಮಾನಗಳು ಭಾರತೀಯ ವಾಯುಪಡೆಯ ಪೈಲೆಟ್ಗಳ ತರಬೇತಿಗಾಗಿ ಫ್ರಾನ್ಸ್ನಲ್ಲೇ ಇದ್ದು, ಉಳಿದ ಐದು ಯುದ್ಧ ವಿಮಾನಗಳು ಜುಲೈ 29ರಂದು ಭಾರತಕ್ಕೆ ಬಂದಿಳಿದಿದ್ದವು. ನವೆಂಬರ್ನಲ್ಲಿ ಮತ್ತೆ 4–5 ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸುವ ಸಾಧ್ಯತೆ ಇದೆ. 2021ರೊಳಗೆ 36 ಯುದ್ಧ ವಿಮಾನಗಳು ಭಾರತಕ್ಕೆ ಹಸ್ತಾಂತರವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.