ನವದೆಹಲಿ:ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪಕ್ಷವನ್ನು ಮುನ್ನಡೆಸಲು ವಿಫಲಗೊಂಡಿರುವುದರಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಸಕ್ರಿಯ ರಾಜಕೀಯಕ್ಕಿಳಿದಿದ್ದಾರೆ ಎಂದು ಬಿಜೆಪಿ ಹೇಳಿದೆ.

ಮಹಾಘಟಬಂಧನದಲ್ಲಿ ಕಾಂಗ್ರೆಸ್ನ್ನು ಯಾರೂ ಸ್ವೀಕರಿಸುತ್ತಿಲ್ಲ.ಹಾಗಾಗಿ ಈಗ ಕಾಂಗ್ರೆಸ್ಗೆ ಊರುಗೋಲಾಗಿ ಪ್ರಿಯಾಂಕಾ ಅವರನ್ನು ಬಳಸಲಾಗಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಹೇಳಿದ್ದಾರೆ.

ಇದನ್ನೂ ಓದಿ:ಪೂರ್ವ ಉ.ಪ್ರದೇಶಕ್ಕೆ ಪ್ರಿಯಾಂಕಾ ಗಾಂಧಿ ಎಐಸಿಸಿ ಪ್ರಧಾನ ಉಸ್ತುವಾರಿ ಕಾರ್ಯದರ್ಶಿ

ತಮ್ಮ ಕುಟುಂಬದಿಂದಲೇ ಆಧಾರ ಹುಡುಕುವ ಮೂಲಕ ರಾಹುಲ್ ಗಾಂಧಿ ವಿಫಲವಾಗಿದ್ದಾರೆ ಎಂದು ಕಾಂಗ್ರೆಸ್ ಸಾರ್ವಜನಿಕವಾಗಿ ಬಹಿರಂಗ ಪಡಿಸಿದೆ.

ಬಿಜೆಪಿಯವರಿಗೆ ಪಕ್ಷವೇ ಕುಟುಂಬ ಆದರೆ ಕಾಂಗ್ರೆಸ್ಗೆಕುಟುಂಬವೇ ಪಕ್ಷ.ಎಲ್ಲ ಆಯ್ಕೆಗಳೂ ಅದೇ ಕುಟುಂಬದಿಂದ ನಡೆಯುತ್ತವೆ. ನೆಹರೂ ನಂತರ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿ? .ಇಲ್ಲಿರುವುದು ಒಂದೇ ಒಂದು ಕುಟುಂಬ. ಹೊಸ ಭಾರತ ಇದೇ ಪ್ರಶ್ನೆಯನ್ನು ಕೇಳುತ್ತಿದೆಎಂದಿದ್ದಾರೆ ಪಾತ್ರಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.