ನವದೆಹಲಿ: ಮನೆಗಳ ಬೆಲೆ ಏರಿಕೆಯ ಬಗ್ಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗುರುವಾರ ಕಳವಳ ವ್ಯಕ್ತಪಡಿಸಿದ್ದಾರೆ. ಮುಂದಿನ ಬಾರಿ ಯಾರಾದರೂ ನಿಮ್ಮ ಬಳಿ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಅಂಕಿಅಂಶಗಳ ಬಗ್ಗೆ ಹೇಳಿದರೆ, ನಿಮ್ಮ ದೇಶೀಯ ಆದಾಯದ ನಿಜಾಂಶವನ್ನು ತೋರಿಸಿ ಎಂದು ಹೇಳಿದ್ದಾರೆ.
.ಇಂಗ್ಲಿಷ್ ಸಬಲೀಕರಣದ ಭಾಷೆ; ಅವಮಾನದ ಭಾಷೆಯಲ್ಲ: ರಾಹುಲ್ ಗಾಂಧಿ.
ಮಹಾರಾಷ್ಟ್ರದ ನಗರಗಳಲ್ಲಿ ವಾಸ ಮಾಡುತ್ತಿರುವ ಕುಟುಂಬಗಳಲ್ಲಿ ಆದಾಯದ ದೃಷ್ಟಿಯಿಂದ ಮೊದಲ ಶೇ 5 ರಷ್ಟು ಇರುವವರಿಗೂ ಕೂಡ, ಮುಂಬೈನಲ್ಲಿ ಮನೆ ಖರೀದಿಸಲು 100 ವರ್ಷಗಳಿಗಿಂತ ಹೆಚ್ಚು ಉಳಿತಾಯ ಬೇಕಾಗುತ್ತದೆ ಎಂದು ಹೇಳುವ ಮಾಧ್ಯಮ ವರದಿಯನ್ನು ರಾಹುಲ್ ಗಾಂಧಿ ತಮ್ಮ ವಾಟ್ಸಾಪ್ ಚಾನೆಲ್ನಲ್ಲಿ ಹಂಚಿಕೊಂಡಿದ್ದಾರೆ.

ಹೌದು, ನೀವು ಅದನ್ನು ಸರಿಯಾಗಿ ಓದಿದ್ದೀರಿ - ಮತ್ತು ನೀವು ಅದನ್ನು ನಂಬದಿದ್ದರೆ, ನಾನು ಅದನ್ನು ಪುನರಾವರ್ತಿಸುತ್ತೇನೆ; 'ಮುಂಬೈನಲ್ಲಿ ಮನೆ ಖರೀದಿಸಲು, ಭಾರತದ ಐದು ಪ್ರತಿಶತದಷ್ಟು ಶ್ರೀಮಂತ ಜನರು ಸಹ 109 ವರ್ಷಗಳ ಕಾಲ ತಮ್ಮ ಆದಾಯದ ಶೇ 30 ಪ್ರತಿಶತವನ್ನು ಉಳಿಸಬೇಕಾಗುತ್ತದೆ’ ಎಂದು ಅವರು ಹೇಳಿದ್ದಾರೆ.
.ಮೋದಿ ಸರ್ಕಾರವು ವಾಸ್ತವದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದೆ: ರಾಹುಲ್ ಗಾಂಧಿ.
‘ಇದು ಹೆಚ್ಚಿನ ದೊಡ್ಡ ನಗರಗಳ ಸ್ಥಿತಿ. ಅಲ್ಲಿ ನೀವು ಅವಕಾಶಗಳು ಮತ್ತು ಯಶಸ್ಸನ್ನು ಹುಡುಕುತ್ತಾ ಶ್ರಮಿಸುತ್ತೀರಿ. ಅಷ್ಟೊಂದು ಉಳಿತಾಯ ಎಲ್ಲಿಂದ ಬರುತ್ತದೆ?’ ಎಂದು ಅವರಿ ಪ್ರಶ್ನಿಸಿದ್ದಾರೆ.

ಬಡವರು ಮತ್ತು ಮಧ್ಯಮ ವರ್ಗದವರ ಆನುವಂಶೀಯವಾಗಿ ಬರುವುದು ಸಂಪತ್ತಲ್ಲ, ಜವಾಬ್ದಾರಿಗಳು. ಮಕ್ಕಳ ದುಬಾರಿ ಶಿಕ್ಷಣ, ದುಬಾರಿ ಚಿಕಿತ್ಸೆಯ ಬಗ್ಗೆ ಚಿಂತೆ, ಪೋಷಕರ ಜವಾಬ್ದಾರಿಗಳು.. ಎಂದು ಅವರು ಹೇಳಿದ್ದಾರೆ.
.ಬಿಜೆಪಿ-ಆರ್ಎಸ್ಎಸ್ ಮೀಸಲಾತಿ ವಿರೋಧಿ ಕ್ರಮಗಳ ವಿರುದ್ಧ ಹೋರಾಟ: ರಾಹುಲ್ ಗಾಂಧಿ.
ಇನ್ನೂ ಅವರಲ್ಲಿ 'ಒಂದು ದಿನ' ನಮಗೆ ನಮ್ಮದೇ ಆದ ಮನೆ ಸಿಗುತ್ತದೆ ಎನ್ನುವ ಕನಸಿದೆ. ಆದರೆ ಆ 'ಒಂದು ದಿನ' ಶ್ರೀಮಂತರಿಗೂ 109 ವರ್ಷಗಳ ದೂರದಲ್ಲಿರುವಾಗ, ಬಡವರು ಕನಸು ಕಾಣುವ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

‘ಪ್ರತಿಯೊಂದು ಕುಟುಂಬಕ್ಕೂ ಆರಾಮದಾಯಕವಾದ ನಾಲ್ಕು ಗೋಡೆಗಳು ಮತ್ತು ತಲೆಯ ಮೇಲೆ ಛಾವಣಿಯ ಅಗತ್ಯವಿದೆ. ದುರದೃಷ್ಟವಶಾತ್, ಅದು ನಿಮ್ಮ ಇಡೀ ಜೀವನದ ಕಠಿಣ ಪರಿಶ್ರಮ ಮತ್ತು ಉಳಿತಾಯಕ್ಕಿಂತ ಹೆಚ್ಚು ವೆಚ್ಚವಾಗುತ್ತದೆ’ ಎಂದಿದ್ದಾರೆ.
.ರಾಜ್ಯಗಳ ಧ್ವನಿ ಅಡಗಿಸಲು ರಾಜ್ಯಪಾಲರ ದುರ್ಬಳಕೆ: ರಾಹುಲ್ ಗಾಂಧಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.