ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕದ ಕಾರಣ ದೇಶದಲ್ಲಿ ಜಾರಿಗೊಳಿಸಿದ ಹಠಾತ್ ಲಾಕ್‌ಡೌನ್ ಅಸಂಘಟಿತ ವಲಯದವರಿಗೆ ಮರಣದಂಡನೆಯಾಗಿ ಪರಿಣಮಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

‘21 ದಿನಗಳಲ್ಲಿ ಕೊರೊನಾವನ್ನು ಕೊನೆಗಾಣಿಸುವುದಾಗಿ ಭರವಸೆ ನೀಡಲಾಯಿತು. ಆದರೆ, ಈ ನಿರ್ಧಾರವು ಕೋಟ್ಯಂತರ ಉದ್ಯೋಗ, ಸಣ್ಣ ಉದ್ಯಮಗಳನ್ನು ಕೊನೆಗಾಣಿಸಿತು’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕೇಂದ್ರ ಸರ್ಕಾರವು ಜಾರಿಗೊಳಿಸಿದ್ದ ಲಾಕ್‌ಡೌನ್ ಜನವಿರೋಧಿ ಎಂದೂ ಅವರು ಟೀಕಿಸಿದ್ದಾರೆ.

ಇದನ್ನೂ ಓದಿ:ದೇಶದ ಸ್ವತ್ತುಗಳನ್ನು ಸರ್ಕಾರ ಮಾರಾಟ ಮಾಡುತ್ತಿರೋದು ನಾಚಿಕೆಗೇಡು: ರಾಹುಲ್ ಗಾಂಧಿ

ಕೇಂದ್ರದ ಎನ್‌ಡಿಎ ಸರ್ಕಾರವನ್ನು ಟೀಕಿಸಿ ಸರಣಿ ವಿಡಿಯೊ ಬಿಡುಗಡೆ ಮಾಡುತ್ತಿರುವ ಅವರು ನಾಲ್ಕನೇ ವಿಡಿಯೊವನ್ನು, ‘ಮೋದಿ ಸರ್ಕಾರ ಭಾರತದ ಆರ್ಥಿಕತೆಯನ್ನು ನಾಶ ಮಾಡಿದ್ದು ಹೇಗೆ’ ಎಂಬ ಶೀರ್ಷಿಕೆಯಡಿ ಬಿಡುಗಡೆ ಮಾಡಿದ್ದಾರೆ.

‘ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಬಡ ಜನರು ದಿನಗೂಲಿ ಅವಲಂಬಿತರಾಗಿದ್ದಾರೆ. ಇವರ ಮೇಲೆ ಸರ್ಕಾರವು ಕೊರೊನಾ ವೈರಸ್ ಲಾಕ್‌ಡೌನ್‌ನೊಂದಿಗೆ ಪ್ರಹಾರ ನಡೆಸಿತು’ ಎಂದು ರಾಹುಲ್ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.