ಪಟ್ನಾ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಬಿಹಾರ ವಿಧಾನಸಭೆ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಸೇರಿದಂತೆ ಮಹಾ ಮೈತ್ರಿಕೂಟದ ಎಲ್ಲ ನಾಯಕರು ಒಟ್ಟುಗೂಡಿ 16 ದಿನಗಳು ನಡೆಸಿದ ‘ಮತದಾರರ ಅಧಿಕಾರ ಯಾತ್ರೆ’ಯು ಸೋಮವಾರ ಮುಕ್ತಾಯಗೊಳ್ಳಲಿದೆ.

‘ಕೊನೇ ದಿನದಂದು ಎಲ್ಲ ನಾಯಕರು ಪಾದಯಾತ್ರೆ ನಡೆಸಲಿದ್ದಾರೆ. ಇಲ್ಲಿನ ಗಾಂಧಿ ಮೈದಾನದಿಂದ ಅಂಬೇಡ್ಕರ್ ಉದ್ಯಾನದಲ್ಲಿರುವ ಡಾ. ಭೀಮ್ ರಾವ್ ಅಂಬೇಡ್ಕರ್ ಪುತ್ಥಳಿವರೆಗೆ ಪಾದಯಾತ್ರೆ ನಡೆಯಲಿದೆ’ ಎಂದು ಕಾಂಗ್ರೆಸ್ ತಿಳಿಸಿದೆ. ಬಿಹಾರದ ಒಟ್ಟು 25 ಜಿಲ್ಲೆಗಳ 110 ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ಸಾಗಿತ್ತು. ಯಾತ್ರೆಯು ಒಟ್ಟು 1,300 ಕಿ.ಮೀನಷ್ಟು ಕ್ರಮಿಸಿದೆ.

ರಾಹುಲ್ ಹಾಗೂ ತೇಜ್ವಸಿ ಅವರೊಂದಿಗೆ ಸಿಪಿಎಂ ನಾಯಕ ದೀಪಾಂಕರ್ ಭಟ್ಟಾಚಾರ್ಯ, ವಿಕಾಸ್ಶೀಲ ಇನ್ಸಾನ್ ಪಕ್ಷದ ಮುಖೇಶ್ ಸಹಾನಿ ಅವರು ಯಾತ್ರೆಯುದ್ದಕ್ಕೂ ಜೊತೆಯಾಗಿದ್ದರು. ಪ್ರತಿದಿನವೂ ಸಭೆಗಳನ್ನು ನಡೆಸಲಾಗಿತ್ತಿತ್ತು. ನಾಯಕರು ಜನರನ್ನು ಉದ್ದೇಶಿ ಭಾಷಣ ಮಾಡುತ್ತಿದ್ದರು.

‘ಮತ ಕಳ್ಳ, ಕುರ್ಚಿ ಕಳ್ಳ’ (ವೋಟ್ ಚೋರ್, ಗದ್ದಿ ಚೋರ್) ಘೋಷಣೆಯು ಯಾತ್ರೆಯುದ್ದಕ್ಕೂ ರಿಂಗಣಿಸಿತು. ‘ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಮೂಲಕ ಚುನಾವಣಾ ಆಯೋಗ ಮತ್ತು ಬಿಜೆಪಿಯು ಕುತಂತ್ರದಿಂದ ಮತಗಳ್ಳತನದಲ್ಲಿ ತೊಡಗಿವೆ’ ಎಂಬುದನ್ನು ಎಲ್ಲ ನಾಯಕರು ತಮ್ಮ ಭಾಷಣದಲ್ಲಿ ಹೇಳಿದರು. ಯಾತ್ರೆಯು ಹಲವು ವಿವಾದಗಳಿಗೂ ಕಾರಣವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.