ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ದೇಶದ ಜನರಿಗೆ ದೀಪಾವಳಿಯ ಶುಭಾಶಯ ಕೋರಿದ್ದಾರೆ. ಇದೇ ವೇಳೆ ದೆಹಲಿಯ ಪ್ರಾಚೀನ ಸಿಹಿ ಮಳೆಗೆಯೊಂದಕ್ಕೆ ತೆರಳಿ ತಾವೇ ಖುದ್ದಾಗಿ ಸಿಹಿ ತಿನಿಸು ತಯಾರಿಸಿರುವ ವಿಡಿಯೊವನ್ನೂ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.

‘ಹಳೇ ದೆಹಲಿಯ ಪ್ರಾಚೀನ ಸಿಹಿ ಮಳಿಗೆ ಘಂಟೇವಾಲಾ ಸ್ವೀಟ್ ಶಾಪ್ನಲ್ಲಿ ಜಾಂಗೀರ್ (ಇಮರ್ತಿ) ಮತ್ತು ಬೇಸನ್ ಲಾಡು ತಯಾರಿಸಿದ್ದೇನೆ. ಶತಮಾನದಷ್ಟು ಹಳೆಯದಾದ ಈ ಮಳಿಗೆಯ ಶುದ್ಧ, ಪಾರಂಪರಿಕ, ಹೃದಯಸ್ಪರ್ಶಿ ಸಿಹಿ ಇನ್ನೂ ಹಾಗೆಯೇ ಉಳಿದಿದೆ. ನೀವು ಹೇಗೆ ವಿಭಿನ್ನವಾಗಿ ದೀಪಾವಳಿಯನ್ನು ಆಚರಿಸುತ್ತಿದ್ದೀರಿ ಎಂಬುದರ ಬಗ್ಗೆ ನಮಗೂ ತಿಳಿಸಿ’ ಎಂದು ರಾಹುಲ್ ‘ಎಕ್ಸ್’ನಲ್ಲಿ ಬರೆದು, ವಿಡಿಯೊ ಪೋಸ್ಟ್ ಮಾಡಿದ್ದಾರೆ.

ಸಿಹಿ ಮಳಿಗೆಯ ಮಾಲೀಕರು ರಾಹುಲ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, ರಾಹುಲ್ ಅವರ ಅಜ್ಜ–ಅಜ್ಜಿ ಹಾಗೂ ಕುಟುಂಬದ ಇತರರಿಗೂ ತಾವು ಸಿಹಿ ಉಣಬಡಿಸಿದ್ದ ವಿಚಾರವನ್ನು ತಿಳಿಸಿದ್ದಾರೆ. ಅಲ್ಲದೇ, ರಾಹುಲ್ ಅವರ ಮದುವೆಗೂ ತಾವೇ ಸಿಹಿ ತಯಾರಿಸಿಕೊಡಬೇಕೆಂಬ ಹಂಬಲದ ಬಗ್ಗೆ ಮಾತನಾಡಿರುವುದೂ ವಿಡಿಯೊದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.