ನವದೆಹಲಿ: ದೇಶ ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆ ನಿರುದ್ಯೋಗವಾಗಿದ್ದು, ಇದಕ್ಕೆ ಮತಕಳ್ಳತನ ನೇರವಾಗಿ ಕಾರಣವಾಗಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಚುನಾವಣೆಗಳಲ್ಲಿ ಮತಕಳ್ಳತನ ಮುಂದುವರಿದ್ದರಿಂದ ನಿರುದ್ಯೋಗ ಮತ್ತು ಭ್ರಷ್ಟಾಚಾರ ಹೆಚ್ಚುತ್ತಲೇ ಇರುತ್ತದೆ. ನಿರುದ್ಯೋಗ ಮತ್ತು ಮತ ಕಳ್ಳತನವನ್ನು ಯುವಜನತೆ ಇನ್ನು ಮುಂದೆ ಸಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
.ಆನ್ಲೈನ್ ಬೆಟ್ಟಿಂಗ್: ED ವಿಚಾರಣೆಗೆ ಹಾಜರಾದ ಕ್ರಿಕೆಟಿಗ ಯುವರಾಜ್ ಸಿಂಗ್.ಮುಕಳೆಪ್ಪ YouTube ಚಾನಲ್ನ ಖ್ವಾಜಾ ವಿರುದ್ಧ ಹುಬ್ಬಳ್ಳಿಯಲ್ಲಿ ಅಪಹರಣ ಕೇಸ್.
ಒಂದು ಸರ್ಕಾರ ಜನರ ವಿಶ್ವಾಸ ಗಳಿಸಿ ಅಧಿಕಾರಕ್ಕೆ ಬಂದಾಗ, ಮೊದಲ ಕರ್ತವ್ಯ ಯುವಕರಿಗೆ ಉದ್ಯೋಗ ಅವಕಾಶವನ್ನು ಸೃಷ್ಟಿಸುವುದಾಗಿದೆ. ಆದರೆ ಬಿಜೆಪಿ ಪ್ರಾಮಾಣಿಕವಾಗಿ ಚುನಾವಣೆಗಳನ್ನು ಗೆಲ್ಲುತ್ತಿಲ್ಲ. ಮತಗಳನ್ನು ಕದಿಯುವ ಮೂಲಕ ಹಾಗೂ ಸಂಸ್ಥೆಗಳನ್ನು ನಿಯಂತ್ರಿಸುವ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ ಎಂದು ರಾಹುಲ್ ಆರೋಪಿಸಿದ್ದಾರೆ.

ಯುವಕರು ತಮ್ಮ ಭವಿಷ್ಯಕ್ಕಾಗಿ ಹೋರಾಡುತ್ತಿದ್ದು, ಕನಸು ಕಾಣುತ್ತಿದ್ದಾರೆ. ಆದರೆ, ಆದರೆ ಪ್ರಧಾನಿ ನರೇಂದ್ರ ಮೋದಿ ಅವರು, ಸೆಲೆಬ್ರಿಟಿಗಳು ತಮ್ಮನ್ನು ಹೊಗಳುವಂತೆ ಮಾಡುವ ಕೆಲಸಗಳ ಮೇಲೆ ಗಮನಹರಿಸುತಿದ್ದಾರೆ. ಹಾಗೆಯೇ ದೇಶದ ಶ್ರೀಮಂತರಿಗೆ ಲಾಭ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದಾರೆ. ಈ ಮೂಲಕ ಯುವಕರ ಭರವಸೆಗಳನ್ನು ಛಿದ್ರಗೊಳಿಸಿದ್ದು, ನಿರಾಶೆಯ ಭಾವನೆ ಮೂಡಿಸಿದ್ದಾರೆ ಎಂದು ರಾಹುಲ್ ಟೀಕಿಸಿದ್ದಾರೆ. ಎಂದು ರಾಹುಲ್ ಟೀಕಿಸಿದ್ದಾರೆ.
.ನವರಾತ್ರಿಯ ಸಂದರ್ಭದಲ್ಲಿ ಈ ವಸ್ತುಗಳನ್ನು ಮನೆಗೆ ತಂದರೆ ಸಮೃದ್ಧಿ ಇಮ್ಮಡಿ.ಚಿತ್ರಮಂದಿರಗಳಲ್ಲಿ ಸಿನಿಮಾ ದರ ನಿಗದಿ:ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ.
ಪರದೆಯ ಮುಂದೆ ಸಸಿಗಳನ್ನು ನೆಡುವ ಮೋದಿ, ಹಿಂಭಾಗದಲ್ಲಿ ತಮ್ಮ ಉದ್ಯೋಗಕ್ಕಾಗಿ ಧ್ವನಿಗೂಡಿಸುವ ಯುವ ಜನತೆಯ ಮೇಲೆ ಲಾಠಿ ಚಾರ್ಚ್ ನಡೆಸುತ್ತಾರೆ ಎಂದು ರಾಹುಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
.ಜೈ ಜೈ ಭವಾನಿ..., ಜೈ ಜಗದಂಬಾ....7 ಸಾವಿರ ತೆರೆಗಳಲ್ಲಿ ಕಾಂತಾರ ಪ್ರೀಕ್ವೆಲ್: ಮೇಕಿಂಗ್ ಬಗ್ಗೆ ರಿಷಬ್ ಹೇಳಿದ್ದೇನು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.