ಮುಂಬೈ: ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷವನ್ನು ಕಂದಕಕ್ಕೆ ನೂಕಲಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದ್ದಾರೆ. ಹಾಗೆಯೇ, ಲೋಕಸಭೆ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಅವರು, ಮಹಾರಾಷ್ಟ್ರದಲ್ಲಿ ನಡೆದ 2024ರ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವುದನ್ನು ಅಲ್ಲಗಳೆದಿದ್ದಾರೆ.

ಮಹಾರಾಷ್ಟ್ರದಲ್ಲಿ ಚುನಾವಣಾ ಆಕ್ರಮ ನಡೆದಿದೆ ಎಂದು ಆರೋಪಿಸಿ ರಾಹುಲ್ ಬರೆದ ಲೇಖನ ಶನಿವಾರ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಇದು, ಭಾರಿ ಚರ್ಚೆ ಹುಟ್ಟುಹಾಕಿದೆ. ಅದಕ್ಕೆ ಪ್ರತಿಯಾಗಿ, ಪಢಣವೀಸ್ ಅವರ ಲೇಖನ ಇಂದು (ಭಾನುವಾರ) ಪ್ರಕಟವಾಗಿದೆ.

'ಜನರು ರಾಹುಲ್ ಗಾಂಧಿಯನ್ನು ತಿರಸ್ಕರಿಸಿದ್ದಾರೆ. ಅದಕ್ಕೆ ಪ್ರತೀಕಾರವೆಂಬಂತೆ ಜನರು ಮತ್ತು ಜನಾದೇಶವನ್ನು ರಾಹುಲ್ ತಿರಸ್ಕರಿಸುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಆಳಕ್ಕೆ ನೂಕುತ್ತದೆ' ಎಂದು ಹೇಳಿದ್ದಾರೆ.

'ದೇಶವನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯುತ್ತಿದ್ದಾರೆ ಹಾಗೂ ಪ್ರಜಾಸತ್ತಾತ್ಮಕ ಪ್ರಕ್ರಿಯೆ, ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಿರಂತರವಾಗಿ ಅನುಮಾನಗಳನ್ನು ಹುಟ್ಟುಹಾಕುವ ಮೂಲಕ ಅವರು ಎಂತಹ ವಿಷ ಹರಡುತ್ತಿದ್ದಾರೆ ಎಂಬುದರ ಬಗ್ಗೆ ಎಚ್ಚರದಿಂದ ಇರಬೇಕು' ಎಂದು ಸಲಹೆ ನೀಡಿದ್ದಾರೆ.

ಮೂರನೇ ಅವಧಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿರುವ ಫಡಣವೀಸ್, 'ಅವರ (ರಾಹುಲ್ ಗಾಂಧಿ) ಲೇಖನವು ನಿರ್ಲಕ್ಷ್ಯಕ್ಕೆ ಯೋಗ್ಯವಾಗಿದೆ. ಆದರೆ, ಅದು 'ಜನರ ಮನವೊಲಿಸಲು ಸಾಧ್ಯವಾಗದಿದ್ದರೆ, ಗೊಂದಲಕ್ಕೀಡು ಮಾಡಿ' ಎಂಬ ಕಾರ್ಯಸೂಚಿಗೆ ಅನುಗುಣವಾಗಿದೆ. ರಾಹುಲ್ ಅವರು ಪದೇ ಪದೇ ಮಾಡುತ್ತಿರುವುದು ಅದನ್ನೇ. ಹಾಗಾಗಿ, ಸಾರ್ವಜನಿಕರ ಎದುರು ಸತ್ಯ ತೆರೆದಿಡುವ ಕೆಲಸವನ್ನು ನಾವು ಮುಂದುವರಿಸಬೇಕಿದೆ. ಅವರು (ರಾಹುಲ್ ಗಾಂಧಿ) ಬಿಹಾರದಲ್ಲಿ ಮುಂಬರುವ ಚುನಾವಣೆಯಲ್ಲಿ ಎದುರಾಗುವ ಸೋಲಿಗೆ ಈಗಲೇ ನೆಪಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ' ಎಂದು ಟೀಕಿಸಿದ್ದಾರೆ.
.ವಿಶ್ಲೇಷಣೆ | ಚುನಾವಣಾ ಫಲಿತಾಂಶ ಕದಿಯುವುದು ಹೇಗೆ?.
2024ರ ಚುನಾವಣೆಗೂ ಮುನ್ನ ರಾಹುಲ್ ಅವರು ನಡೆಸಿದ್ದ ಎರಡು ಪಾದಯಾತ್ರೆ ಬಗ್ಗೆಯೂ ಫಡಣವೀಸ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

'ಮಹಾರಾಷ್ಟ್ರ ಚುನಾವಣೆಯು ಮಹಾಯುತಿ (ಬಿಜೆಪಿ, ಶಿವಸೇನಾ, ಎನ್ಸಿಪಿ ಮೈತ್ರಿ) ಹಾಗೂ ಮಹಾ ವಿಕಾಸ್ ಆಘಾಡಿ (ಕಾಂಗ್ರೆಸ್, ಶಿವಸೇನಾ–ಯುಬಿಟಿ, ಎನ್ಸಿಪಿ–ಎಸ್ಪಿ ಮೈತ್ರಿ) ನಡುವಣ ಸ್ಪರ್ಧೆಯಾಗಿರಲಿಲ್ಲ. ಬದಲಾಗಿ ಇನ್ನೊಂದು ಪ್ರಮುಖ ವಿಚಾರವಿತ್ತು – ಭಾರತ್ ಜೋಡೊ ಅಭಿಯಾನ. 'ಜೋಡೊ' (ಒಗ್ಗೂಡಿಸಿ) ಹೆಸರಿನಲ್ಲಿ ನಡೆಸಲಾದ ಈ 'ತೋಡೊ' (ವಿಭಜನೆ) ಅಭಿಯಾನ ಏನು ಮಾಡುತ್ತಿತ್ತು? ಅದು, ನ್ಯಾಯಾಂಗ ಮತ್ತು ಚುನಾವಣಾ ಆಯೋಗವೂ ಸೇರಿದಂತೆ ಸಾಂವಿಧಾನಿಕ ಸಂಸ್ಥೆಗಳ ಕುರಿತು ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯಗಳನ್ನು ಸೃಷ್ಟಿಸುತ್ತಿತ್ತು. ಆ ಮೂಲಕ ಜನರನ್ನು ದೇಶದ ವಿರುದ್ಧ ಹೋರಾಡಲು ಪ್ರಚೋದಿಸುತ್ತಿತ್ತು' ಎಂದು ಕಿಡಿಕಾರಿದ್ದಾರೆ. ಹಾಗೆಯೇ, ಭಾರತ ಜೋಡೊ ಯಾತ್ರೆಯಲ್ಲಿ ಭಾಗವಹಿಸಿದ್ದವರಲ್ಲಿ ಹೆಚ್ಚಿನವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸರ್ಕಾರ, 2012ರಲ್ಲಿ 'ನಗರ ನಕ್ಸಲ್' ಘಟಕಗಳ ಪಟ್ಟಿಗೆ ಸೇರಿಸಿದ್ದವರು ಎಂದು ಉಲ್ಲೇಖಿಸಿದ್ದಾರೆ.

'ನಿಮ್ಮ ಕಾಂಗ್ರೆಸ್ ಸರ್ಕಾರ, 1950ರಿಂದಲೂ ಮುಖ್ಯ ಚುನಾವಣಾ ಆಯುಕ್ತರನ್ನು (ಸಿಇಸಿ) ನೇರವಾಗಿ ನೇಮಕ ಮಾಡುತ್ತಾ ಬಂದಿತ್ತು. ದೇಶದಲ್ಲಿ ಹೊಸ ಕಾನೂನು ಜಾರಿಗೆ ಬರುವವರೆಗೆ ನೇಮಕವಾದ 26ರಲ್ಲಿ 25 ಮಂದಿಯನ್ನು ಕೇಂದ್ರ ಸರ್ಕಾರವೇ ನೇರವಾಗಿ ನೇಮಿಸಿತ್ತು. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ಸಿಇಸಿ ನೇಮಕಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಅಥವಾ ವಿರೋಧ ಪಕ್ಷಗಳ ಪೈಕಿ ಅತಿಹೆಚ್ಚು ಸ್ಥಾನಗಳನ್ನು ಗೆದ್ದ ಪಕ್ಷದ ನಾಯಕನನ್ನು ಒಳಗೊಂಡ ಸಮಿತಿಯನ್ನು ಮೊದಲ ಬಾರಿಗೆ ರಚಿಸಿದರು. ಆದರೆ ನೀವು, ಪ್ರಜಾಪ್ರಭುತ್ವವನ್ನು ಬಲಪಡಿಸುವಂತಹ ಮತ್ತು ನಿಮ್ಮ ಅವಧಿಯಲ್ಲಿ ಎಂದಿಗೂ ಪಾಲನೆಯಾಗದಂತಹ ಇಂತಿಹ ಕ್ರಮವನ್ನು ಸಮ್ಮತಿಸುವುದಿಲ್ಲ ಎಂಬಂತೆ ತೋರುತ್ತಿದೆ' ಎಂದು ತಿವಿದಿದ್ದಾರೆ.

ಮತದಾರರ ಸಂಖ್ಯೆ ಏರಿಕೆ ಮತ್ತು ನೋಂದಣಿಗೆ ಸಂಬಂಧಿಸಿದಂತೆ, 'ಲೋಕಸಭಾ ಹಾಗೂ ವಿಧಾನಸಭಾ ಚುಣಾವಣೆಗಳ ನಡುವೆ ಮತದಾರರ ಸಂಖ್ಯೆ ಹೇಗೆ ಏರಿಕೆಯಾಯಿತು ಎಂಬುದರ ಕುರಿತು ನೀವು ಅಂಕಿ–ಅಂಶ ಬಯಸುವುದಾದರೆ ಇಲ್ಲಿದೆ; 2004ರಲ್ಲಿ ಲೋಕಸಭಾ ಚುನಾವಣೆ ನಂತರ ವಿಧಾನಸಭಾ ಚುನಾವಣೆ ಹೊತ್ತಿಗೆ ಮತದಾರರ ಸಂಖ್ಯೆಯಲ್ಲಿ ಶೇ 5ರಷ್ಟು ಏರಿಕೆಯಾಗಿತ್ತು. ಅದು 2009ರಲ್ಲಿ ಶೇ 4ರಷ್ಟು ಏರಿತ್ತು. 2014ರಲ್ಲಿ ಶೇ 3ರಷ್ಟು, 2019ರಲ್ಲಿ ಶೇ 1ರಷ್ಟು ಮತ್ತು 2024ರಲ್ಲಿ ಶೇ 4ರಷ್ಟು ಹೆಚ್ಚಾಗಿತ್ತು. ಹಾಗಾಗಿ, 2024ರಲ್ಲಿ ಹೊಸದೇನೂ ಸಂಭವಿಸಲಿಲ್ಲ' ಎಂದು ಪ್ರತಿಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.