ಮಹಾರಾಷ್ಟ್ರ ವಿಧಾನಸಭೆಗೆ 2024ರ ನವೆಂಬರ್ನಲ್ಲಿ ಚುನಾವಣೆ ನಡೆಸಿದ ರೀತಿಯ ಕುರಿತು ಸಂಸತ್ತಿನಲ್ಲಿ ಫೆಬ್ರುವರಿ 3ರಂದು ಮಾಡಿದ ಭಾಷಣ ಮತ್ತು ನಂತರ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ನಾನು ಕಳವಳ ವ್ಯಕ್ತಪಡಿಸಿದ್ದೇನೆ. ಎಲ್ಲ ಬಾರಿಯೂ ಎಲ್ಲ ಕಡೆಗಳಲ್ಲಿಯೂ ಅಲ್ಲದಿದ್ದರೂ ಸಾಮಾನ್ಯವಾಗಿ ಭಾರತದ ಚುಣಾವಣೆಗಳ ನ್ಯಾಯಸಮ್ಮತತೆಯ ಕುರಿತು ನನಗೆ ಅನುಮಾನಗಳಿವೆ. ಸಣ್ಣ ಪ್ರಮಾಣದ ಮೋಸದ ಬಗ್ಗೆ ನಾನು ಮಾತನಾಡುತ್ತಿಲ್ಲ, ಬದಲಿಗೆ ರಾಷ್ಟ್ರ ಮಟ್ಟದ ಸಂಸ್ಥೆಗಳನ್ನು ಬಳಸಿಕೊಂಡು ಭಾರಿ ಪ್ರಮಾಣದಲ್ಲಿ ಮಾಡುವ ವಂಚನೆ ಇದು.

ಈ ಹಿಂದಿನ ಕೆಲವು ಚುನಾವಣೆಗಳ ಫಲಿತಾಂಶ ಸರಿಯಾಗಿಲ್ಲ ಎಂದು ಅನಿಸಿತ್ತು. ಆದರೆ, 2024ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಫಲಿತಾಂಶ ಕಣ್ಣು ಕುಕ್ಕುವ ರೀತಿಯಲ್ಲಿ ವಿಚಿತ್ರವಾಗಿತ್ತು. ವಂಚನೆಯು ಎಷ್ಟು ವ್ಯಾಪಕವಾಗಿತ್ತು ಎಂದರೆ ಮುಚ್ಚಿಡುವ ಎಲ್ಲ ಪ್ರಯತ್ನಗಳ ಬಳಿಕವೂ ಕಣ್ಣಿಗೆ ರಾಚುವ ಸಾಕ್ಷ್ಯಗಳು ಅಧಿಕೃತ ಅಂಕಿಅಂಶಗಳಿಂದಲೇ ಮೂಡಿಬಂದವು. ಅನಧಿಕೃತ ಮೂಲಗಳನ್ನು ಅವಲಂಬಿಸುವ ಅಗತ್ಯವೇ ಇರಲಿಲ್ಲ. ಹಂತ ಹಂತವಾಗಿ ನಡೆಸಿದ ವಂಚನೆಯು ಬಯಲಾಗಿದೆ.

ಹಂತ 1: ಅಂಪೈರ್ ನೇಮಕದ ಸಮಿತಿಯಲ್ಲಿಯೇ ವಂಚನೆ

ಚುನಾವಣಾ ಆಯುಕ್ತರನ್ನು ಪ್ರಧಾನಿ ಮತ್ತು ಗೃಹ ಸಚಿವರೇ 2:1 ಬಹುಮತದಲ್ಲಿ ನೇಮಕ ಮಾಡುವುದನ್ನು 2023ರ ಚುನಾವಣಾ ಆಯುಕ್ತರ ನೇಮಕ ಕಾಯ್ದೆಯು ಖಾತರಿಪಡಿಸಿದೆ. ಏಕೆಂದರೆ ಆಯ್ಕೆ ಸಮಿತಿಯ ಮೂರನೇ ಸದಸ್ಯರಾದ ವಿರೋಧ ಪಕ್ಷದ ನಾಯಕ ಸದಾ ಏಕಾಂಗಿಯಾಗಿಬಿಡುತ್ತಾರೆ. ಅಂಪೈರ್ಗಳಾಗಿ ಯಾರನ್ನು ನೇಮಕ ಮಾಡಬೇಕು ಎಂಬುದನ್ನು ಇವರಿಬ್ಬರೇ ನಿರ್ಧರಿಸಿಬಿಡುತ್ತಾರೆ. ಆಯ್ಕೆ ಸಮಿತಿಯಲ್ಲಿ ಮುಖ್ಯ ನ್ಯಾಯಮೂರ್ತಿಯ ಬದಲಿಗೆ ಸಂಪುಟ ಸಚಿವರನ್ನು ಸೇರಿಸಿದ ನಿರ್ಧಾರವು ನೈತಿಕವಾಗಿ ಸರಿ ಅನಿಸಲು ಸಾಧ್ಯವೇ ಇಲ್ಲ. ಮಹತ್ವದ ಸಂಸ್ಥೆಯೊಂದರ ಮುಖ್ಯಸ್ಥರ ಆಯ್ಕೆ ಸಮಿತಿಯಲ್ಲಿ ಇದ್ದ ತಟಸ್ಥ ವ್ಯಕ್ತಿಯನ್ನು ನಿಯಮ ಮೀರಿ ಕಿತ್ತು ಹಾಕಿರುವುದು ಏಕೆ? ಈ ಪ್ರಶ್ನೆಯನ್ನು ನೀವೇ ಕೇಳಿಕೊಳ್ಳಿ. ಪ್ರಶ್ನೆ ಕೇಳಿಕೊಂಡರೆ ಉತ್ತರ ಸಿಕ್ಕೇ ಸಿಗುತ್ತದೆ.

ಹಂತ 2: ಮತದಾರರ ಪಟ್ಟಿಗೆ ನಕಲಿ ಮತದಾರರ ಹೆಸರು ಸೇರ್ಪಡೆ

ಚುನಾವಣಾ ಆಯೋಗದ ಮಾಹಿತಿ ಪ್ರಕಾರ 2019ರಲ್ಲಿ ನಡೆದ ವಿಧಾನಸಭಾ ಚುನಾವಣೆಯ ಹೊತ್ತಿಗೆ ಮಹಾರಾಷ್ಟ್ರದ ಮತದಾರರ ಸಂಖ್ಯೆ 8.98 ಕೋಟಿ. ಐದು ವರ್ಷಗಳಲ್ಲಿ ಅಂದರೆ, 2024ರ ಲೋಕಸಭಾ ಚುನಾವಣೆಯ ಹೊತ್ತಿಗೆ ಈ ಸಂಖ್ಯೆ 9.29 ಕೋಟಿಗೆ ಏರಿಕೆಯಾಗಿತ್ತು. ಆದರೆ, ಐದು ತಿಂಗಳ ಬಳಿಕ 2024ರ ನವೆಂಬರ್ನಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಹೊತ್ತಿಗೆ ಮತದಾರರ ಸಂಖ್ಯೆ 9.70 ಕೋಟಿಗೆ ಜಿಗಿದಿತ್ತು. ಐದು ವರ್ಷಗಳಲ್ಲಿ ಮತದಾರರ ಸಂಖ್ಯೆಯಲ್ಲಿ ಆಗಿರುವ ಏರಿಕೆ 31 ಲಕ್ಷ ಮಾತ್ರ. ಆದರೆ, ಐದೇ ತಿಂಗಳಲ್ಲಿ 41 ಲಕ್ಷ ಮತದಾರರು ಸೇರ್ಪಡೆಯಾಗಿದ್ದಾರೆ. ಇದು ನಂಬಲು ಅಸಾಧ್ಯವಾದ ಜಿಗಿತ. ಏಕೆಂದರೆ, ಸರ್ಕಾರದ ಅಂದಾಜು ಪ್ರಕಾರವೇ ಮಹಾರಾಷ್ಟ್ರದಲ್ಲಿರುವ ವಯಸ್ಕರ ಸಂಖ್ಯೆಯು 9.54 ಕೋಟಿ. ಆದರೆ, ಒಟ್ಟು ಮತದಾರರ ಸಂಖ್ಯೆ 9.70 ಕೋಟಿ.

ಹಂತ 3: ಮತದಾರರ ಸಂಖ್ಯೆಯ ಜೊತೆಗೆ ಮತದಾನದ ಪ್ರಮಾಣವೂ ಏರಿಕೆ

ವೀಕ್ಷಕರು ಮತ್ತು ಹೆಚ್ಚಿನ ಭಾಗೀದಾರರಿಗೆ ಮಹಾರಾಷ್ಟ್ರದ ಮತದಾನದ ದಿನವು ಸಂಪೂರ್ಣವಾಗಿ ಸಹಜವಾಗಿತ್ತು. ಎಲ್ಲೆಡೆಯಂತೆಯೇ ಮತದಾರರು ಸರತಿ ಸಾಲಿನಲ್ಲಿ ನಿಂತರು, ಮತದಾನ ಮಾಡಿದರು ಮತ್ತು ಮನೆಗೆ ಹೋದರು. ಸಂಜೆ 5 ಗಂಟೆಗೆ ಮೊದಲು ಮತಗಟ್ಟೆ ತಲುಪಿದ ಎಲ್ಲರಿಗೂ ಮತದಾನಕ್ಕೆ ಅವಕಾಶ ಕೊಡಲಾಗಿದೆ. ಯಾವುದೇ ಮತಗಟ್ಟೆಯಲ್ಲಿಯೂ ಅಸಹಜವಾದ, ಬಹು ಉದ್ದದ ಸರತಿ ಸಾಲು ಇತ್ತು ಎಂಬುದು ಎಲ್ಲಿಯೂ ವರದಿಯಾಗಿಲ್ಲ.

ಆದರೆ, ಚುನಾವಣಾ ಆಯೋಗದ ಪ್ರಕಾರ, ಮತದಾನದ ದಿನ ನಾಟಕೀಯ ಬೆಳವಣಿಗೆಗಳು ನಡೆದಿವೆ. ಸಂಜೆ 5 ಗಂಟೆಯ ಹೊತ್ತಿಗೆ ಮತದಾನ ಪ್ರಮಾಣವು ಶೇ 58.22ರಷ್ಟು ಆಗಿತ್ತು. ಮತದಾನ ಮುಕ್ತಾಯವಾದ ಬಳಿಕವೂ ಮತದಾನ ಪ್ರಮಾಣ ಏರಿಕೆಯಾಗುತ್ತಲೇ ಹೋಯಿತು. ಮತದಾನದ ಅಂತಿಮ ಪ್ರಮಾಣವನ್ನು ಮರುದಿನ ಬೆಳಿಗ್ಗೆ ಪ್ರಕಟಿಸಲಾಯಿತು. ಆ ಪ್ರಮಾಣವು ಶೇ 66.05ರಷ್ಟು ಇತ್ತು. ಈ ಅಭೂತಪೂರ್ವ ಏರಿಕೆಯು ಶೇ 7.38ರಷ್ಟಿದೆ. ಅಥವಾ 76 ಲಕ್ಷ ಜನರು ಹೆಚ್ಚುವರಿಯಾಗಿ ಮತದಾನ ಮಾಡಿದ್ದಾರೆ. ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ಈ ಹಿಂದೆ ದಾಖಲಾದ ಮತಪ್ರಮಾಣಕ್ಕಿಂತ ಇದು ಬಹಳ ಹೆಚ್ಚು (ಪಟ್ಟಿ ನೋಡಿ).

ಹಂತ 4: ಆಯ್ದ ಮತಗಟ್ಟೆ ಗುರಿಯಾಗಿಸಿ ಮಾಡಿದ ವಂಚನೆಯಿಂದ ಬಿಜೆಪಿಗೆ ಗೆಲುವು

ಅಸಂಗತವಾದ ಇನ್ನಷ್ಟು ವಿಚಾರಗಳೂ ಇವೆ. ಮಹಾರಾಷ್ಟ್ರದಲ್ಲಿ ಸುಮಾರು ಒಂದು ಲಕ್ಷ ಮತಗಟ್ಟೆಗಳು ಇವೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಳಪೆ ಪ್ರದರ್ಶನ ತೋರಿದ್ದ 85 ವಿಧಾನಸಭಾ ಕ್ಷೇತ್ರಗಳ 12 ಸಾವಿರ ಮತಗಟ್ಟೆಗಳನ್ನು ಆಯ್ದು ಹೆಚ್ಚುವರಿ ಮತಗಳನ್ನು ಸೇರ್ಪಡೆ ಮಾಡಲಾಗಿದೆ. ಸಂಜೆ 5 ಗಂಟೆಯ ನಂತರ ಮತಗಟ್ಟೆಗಳಲ್ಲಿ ಸರಾಸರಿ 600 ಮತಗಳ ಏರಿಕೆ ಆಗಿದೆ. ಒಬ್ಬ ಮತದಾರನಿಗೆ ಮತದಾನ ಮಾಡಲು ಕನಿಷ್ಠ ಒಂದು ನಿಮಿಷ ಬೇಕು ಎಂದು ಭಾವಿಸಿದರೂ ಮುಂದಿನ 10 ತಾಸು ಮತದಾನ ಮುಂದುವರಿಯಬೇಕಿತ್ತು. ಆದರೆ ಹಾಗೆ ಆಗಿಲ್ಲ. ಹಾಗಾಗಿಯೇ ಈ ಪ್ರಶ್ನೆ ಬರುತ್ತದೆ: ‘ಈ ಹೆಚ್ಚುವರಿ ಮತದಾನ ಹೇಗೆ ನಡೆಯಿತು?’ ಈ 85 ಕ್ಷೇತ್ರಗಳ ಪೈಕಿ ಹೆಚ್ಚಿನವುಗಳಲ್ಲಿ ಎನ್ಡಿಎ ಅಭ್ಯರ್ಥಿಗಳು ಗೆದ್ದಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.

ಮತದಾನದಲ್ಲಿ ಆಗಿರುವ ಭಾರಿ ಏರಿಕೆಯನ್ನು ‘ಯುವಜನರ ಭಾಗೀದಾರಿಕೆಯು ಸ್ವಾಗತಾರ್ಹ ಪ್ರವೃತ್ತಿ’ ಎಂದು ಚುನಾವಣಾ ಆಯೋಗ ಬಣ್ಣಿಸಿದೆ. ಆದರೆ, ಈ ಸ್ವಾಗತಾರ್ಹ ಪ್ರವೃತ್ತಿಯು 12 ಸಾವಿರ ಮತಗಟ್ಟೆಗಳಿಗೆ ಸೀಮಿತವಾಗಿದೆ, ಉಳಿದ ಸುಮಾರು 88 ಸಾವಿರ ಮತಗಟ್ಟೆಗಲ್ಲಿ ಈ ಪ್ರವೃತ್ತಿ ಕಂಡುಬಂದಿಲ್ಲ. ಇದು ದುರಂತಮಯ ಅಲ್ಲ ಎಂದಾದರೆ, ಹಾಸ್ಯಾಸ್ಪದವಂತೂ ಹೌದು.

ಅಂತಹ ಒಂದು ಕ್ಷೇತ್ರ ಕಾಮ್ಠಿ. ಇಲ್ಲಿ ನಡೆದಿರುವುದು ಅಧ್ಯಯನ ಯೋಗ್ಯವಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 1.36 ಲಕ್ಷ ಮತಗಳು ಸಿಕ್ಕಿದ್ದವು. ಬಿಜೆಪಿಗೆ ಸಿಕ್ಕಿದ್ದು 1.19 ಲಕ್ಷ ಮತಗಳು. 2024ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸಿಕ್ಕಿದ್ದು 1.34 ಲಕ್ಷ ಮತಗಳು. ಹೆಚ್ಚು ಕಡಿಮೆ ಲೋಕಸಭಾ ಚುನಾವಣೆಯಲ್ಲಿ ಸಿಕ್ಕಷ್ಟೇ ಮತಗಳು. ಆದರೆ ಬಿಜೆಪಿಗೆ ಮಾತ್ರ 1.75 ಲಕ್ಷ ಮತಗಳು ಸಿಕ್ಕಿವೆ. 56 ಸಾವಿರ ಮತಗಳ ಏರಿಕೆಯಾಗಿದೆ. ಎರಡು ಚುನಾವಣೆಗಳ ನಡುವೆ ಸೇರ್ಪಡೆಯಾದ 35 ಸಾವಿರ ಹೊಸ ಮತದಾರರ ಕಾರಣದಿಂದ ಈ ಏರಿಕೆ ಸಾಧ್ಯವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡದ ಎಲ್ಲರನ್ನೂ ಮತ್ತು ಹೊಸದಾಗಿ ಸೇರ್ಪಡೆಯಾದ ಬಹುತೇಕ ಎಲ್ಲ 35 ಸಾವಿರ ಮತದಾರರನ್ನು ಬಿಜೆಪಿಯು ಸೂಜಿಗಲ್ಲಿನಂತೆ ಸೆಳೆದಿದೆ. ಕಮಲದ ಆಕಾರದಲ್ಲಿರುವ ಸೂಜಿಗಲ್ಲನ್ನು ಕಲ್ಪಿಸಿಕೊಳ್ಳುವುದು ಕಷ್ಟವೇನಲ್ಲ.

ಮೇಲೆ ನಾಲ್ಕು ಹಂತಗಳಲ್ಲಿ ವಿವರಿಸಿದ ಅಂಶಗಳ ಪರಿಣಾಮವಾಗಿ, 2024ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸಿದ್ದ 149 ಕ್ಷೇತ್ರಗಳ ಪೈಕಿ 132ರಲ್ಲಿ ಗೆದ್ದಿದೆ. ಗೆಲುವಿನ ಪ್ರಮಾಣವು ಶೇ 89ರಷ್ಟಿದೆ. ಆ ಪಕ್ಷವು ಎಂದೂ ಎಲ್ಲಿಯೂ ಪಡೆಯದ ಗೆಲುವಿನ ಪ್ರಮಾಣ ಇದಾಗಿದೆ. ಐದು ತಿಂಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಈ ಕ್ಷೇತ್ರಗಳಲ್ಲಿ ಸಿಕ್ಕಿದ್ದ ಗೆಲುವಿನ ಪ್ರಮಾಣನವು ಶೇ 32ರಷ್ಟು.

ಹಂತ 5: ಸಾಕ್ಷ್ಯಗಳ ಅಡಗಿಸುವಿಕೆ

ವಿರೋಧ ಪಕ್ಷಗಳು ಕೇಳಿದ ಎಲ್ಲ ಪ್ರಶ್ನೆಗಳಿಗೂ ಚುನಾವಣಾ ಆಯೋಗದ ಉತ್ತರ ಮೌನ ಮತ್ತು ಕೆಲವೊಮ್ಮೆ ಆಕ್ರಮಣಕಾರಿ ನಡವಳಿಕೆಯೇ ಆಗಿತ್ತು. 2024ರ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯ ಮತದಾರರ ಪಟ್ಟಿಯನ್ನು ಫೋಟೊಸಹಿತ ಒದಗಿಸಿ ಎಂಬ ಕೋರಿಕೆಯನ್ನು ಆಯೋಗವು ಸಾರಾಸಗಟಾಗಿ ತಿರಸ್ಕರಿಸಿದೆ. ವಿಧಾನಸಭಾ ಚುನಾವಣೆ ನಡೆದು ಒಂದು ತಿಂಗಳ ಬಳಿಕ ನಡೆದುದು ಇನ್ನೂ ಆಘಾತಕಾರಿ. ಮತಗಟ್ಟೆಗಳಲ್ಲಿ ಚಿತ್ರೀಕರಿಸಿದ ವಿಡಿಯೊ ಮತ್ತು ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಒದಗಿಸಿ ಎಂದು ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತು. ಆದರೆ, ಕೇಂದ್ರ ಸರ್ಕಾರವು ಚುನಾವಣಾ ಆಯೋಗದ ಜೊತೆಗೆ ಸಮಾಲೋಚನೆ ನಡೆಸಿ, 1961ರ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿದ ನಿಯಮಗಳ ಸೆಕ್ಷನ್– 93(2)(ಎ)ಗೆ ತಿದ್ದುಪಡಿ ಮಾಡಿ ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ಹಾಗೂ ಎಲೆಕ್ಟ್ರಾನಿಕ್ ದಾಖಲೆಗಳ ಲಭ್ಯತೆ ಮೇಲೆ ನಿರ್ಬಂಧ ವಿಧಿಸಿತು. ತಿದ್ದುಪಡಿಯಾದ ವಿಷಯ ಮತ್ತು ತಿದ್ದುಪಡಿಯ ಸಮಯವೇ ಎಲ್ಲವನ್ನೂ ವಿವರಿಸುತ್ತದೆ. ಇತ್ತೀಚೆಗೆ ಪತ್ತೆಯಾದ ಒಂದೇ ಸಂಖ್ಯೆಯ ಒಂದಕ್ಕಿಂತ ಹೆಚ್ಚು ಮತದಾರರ ಚೀಟಿಗಳು ಕೂಡ ನಕಲಿ ಮತದಾನದ ಕುರಿತ ಕಳವಳವನ್ನು ಹೆಚ್ಚಿಸುತ್ತವೆ. ಈಗ ಪತ್ತೆಯಾಗಿರುವುದು ಒಂದು ಸಣ್ಣ ಭಾಗ ಮಾತ್ರ ಆಗಿರುವ ಸಾಧ್ಯತೆಯೂ ಇದೆ.

ಮತದಾರರ ಪಟ್ಟಿಗಳು ಮತ್ತು ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಇರುವ ಸಾಧನಗಳು. ಪ್ರಜಾಪ್ರಭುತ್ವದ ಉಲ್ಲಂಘನೆಯಾಗುತ್ತಿರುವ ಸಂದರ್ಭದಲ್ಲಿ ಅವುಗಳನ್ನು ತಿಜೋರಿಯಲ್ಲಿಟ್ಟು ಬೀಗ ಹಾಕಲು ಅವು ಆಭರಣಗಳಲ್ಲ. ಯಾವುದೇ ದಾಖಲೆಯನ್ನು ನಾಶಪಡಿಸಲಾಗಿಲ್ಲ ಎಂಬ ಖಾತರಿ ಪಡೆದುಕೊಳ್ಳುವ ಹಕ್ಕು ಭಾರತದ ಜನರಿಗೆ ಇದೆ. ಆಯ್ದ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡುವುದು ಅಥವಾ ಮತಗಟ್ಟೆ ಬದಲಾಯಿಸುವುದು ಮುಂತಾದ ಮೋಸದ ವಿಧಾನಗಳ ಕುರಿತು ಸಾಕ್ಷ್ಯಗಳು ಇವೆ. ಈ ಕುರಿತು ಜನರಲ್ಲಿ ಕಳವಳವೂ ಇದೆ. ದಾಖಲೆಗಳ ಪರಿಶೀಲನೆಯಿಂದ ಇಂತಹವುಗಳನ್ನು ಗುರುತಿಸಬಹುದಾಗಿದೆ. ಚುನಾವಣೆಯಲ್ಲಿ ವಂಚನೆ ನಡೆಸುವ ಈ ವಿಧಾನಗಳನ್ನು ಕೆಲವು ವರ್ಷಗಳಿಂದ ಅನುಸರಿಸಲಾಗುತ್ತಿದೆ ಎಂಬ ಕಳವಳವೂ ಇದೆ. ದಾಖಲೆಗಳ ಪರಿಶೀಲನೆಯಿಂದ ಈ ವಂಚನೆಯ ಕಾರ್ಯವಿಧಾನ ಹೇಗೆ ಮತ್ತು ಶಾಮೀಲಾದವರು ಯಾರು ಎಂಬುದನ್ನು ಪತ್ತೆ ಮಾಡಲು ಸಾಧ್ಯವಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ವಿರೋಧ ಪಕ್ಷಗಳು ಮತ್ತು ಸಾರ್ವಜನಿಕರಿಗೆ ಈ ದಾಖಲೆ ಲಭ್ಯ ಆಗುವುದನ್ನು ತಡೆಯಲಾಗಿದೆ. ಮಹಾರಾಷ್ಟ್ರದಲ್ಲಿ 2024ರ ನವೆಂಬರ್ನಲ್ಲಿ ನಡೆದ ಚುನಾವಣೆಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮೋಸ ಮಾಡಿರುವುದು ಏಕೆ ಎಂಬುದನ್ನು ಊಹಿಸುವುದು ಕಷ್ಟವೇನಲ್ಲ. ಚುನಾವಣೆಯಲ್ಲಿ ವಂಚನೆ ಎಂದರೆ ಮ್ಯಾಚ್ ಫಿಕ್ಸಿಂಗ್ ಇದ್ದ ಹಾಗೆ. ಮ್ಯಾಚ್ ಫಿಕ್ಸ್ ಮಾಡಿದವರು ಆಟ ಗೆಲ್ಲಬಹುದು. ಆದರೆ, ಸಂಸ್ಥೆಗಳು ಮತ್ತು ಫಲಿತಾಂಶದ ಮೇಲೆ ಜನರಿಗೆ ಇರುವ ವಿಶ್ವಾಸಕ್ಕೆ ಆಗುವ ಹಾನಿಯನ್ನು ಎಂದೂ ಸರಿಪಡಿಸಲಾಗದು.

ಮ್ಯಾಚ್ ಫಿಕ್ಸಿಂಗ್ ಚುನಾವಣೆಯು ಯಾವುದೇ ಪ್ರಜಾಪ್ರಭುತ್ವಕ್ಕೆ ಉಣಿಸುವ ವಿಷವಾಗಿದೆ.

ಲೇಖಕ: ಲೋಕಸಭೆy ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.