ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರೀಯ ರೈಲ್ವೆಗೆ ಹೆಚ್ಚು ಪ್ರಯಾಣಿಕರ ಹೊತ್ತು ಸಾಗಿದ ಹೆಗ್ಗಳಿಕೆ

Published 2 ಏಪ್ರಿಲ್ 2024, 15:20 IST
Last Updated 2 ಏಪ್ರಿಲ್ 2024, 15:20 IST
ಅಕ್ಷರ ಗಾತ್ರ

ಮುಂಬೈ: ಕೇಂದ್ರೀಯ ರೈಲ್ವೆಯು 2023–24ನೇ ಆರ್ಥಿಕ ಸಾಲಿನಲ್ಲಿ ಅತಿ ಹೆಚ್ಚು ಪ್ರಯಾಣಿಕರನ್ನು ಹೊತ್ತು ಸಾಗಿರುವ ಭಾರತೀಯ ರೈಲ್ವೆ ವಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು 158.3 ಕೋಟಿ ಪ್ರಯಾಣಿಕರನ್ನು ಅವರ ಗುರಿ ತಲುಪಿಸಿದೆ.

ಕಳೆದ ಆರ್ಥಿಕ ವರ್ಷದಲ್ಲಿ 146.5 ಕೋಟಿ ಪ್ರಯಾಣಿಕರನ್ನು ಈ  ರೈಲ್ವೆ ವಲಯವು ಗುರಿತಲುಪಿಸಿತ್ತು. ಕಳೆದ ಸಾಲಿಗೆ ಹೋಲಿಸಿದರೆ ಈ ಸಾಲಿನಲ್ಲಿ ಶೇ 8ರಷ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. 

2023–24ರಲ್ಲಿ ₹ 7,311 ಕೋಟಿ ಆದಾಯ ಗಳಿಕೆಯಾಗಿದೆ. ಕಳೆದ ವರ್ಷದ ಆದಾಯವು ₹ 6,414 ಕೋಟಿ.

ಕೇಂದ್ರೀಯ ರೈಲ್ವೆಯ ಮುಖ್ಯ ಕಚೇರಿ ಮುಂಬೈನಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT