ಇಂದೋರ್: ಉದ್ಯಮಿ ರಾಜಾ ರಘುವಂಶಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಮೇಘಾಲಯ ಪೊಲೀಸರು ನಗರದ ರಾಜಕಾಲುವೆಯಲ್ಲಿ ಕೃತ್ಯಕ್ಕೆ ಬಳಸಿದ್ದರು ಎನ್ನಲಾದ ವಸ್ತುಗಳಿದ್ದ ಕೈಚೀಲವನ್ನು ಬುಧವಾರ ಪತ್ತೆಮಾಡಿ ವಶಕ್ಕೆ ಪಡೆದಿದ್ದಾರೆ.

ಆರೋಪಿ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಶಿಲೋಮ್ ಜೇಮ್ಸ್ ಸಮೇತ ಪಲಾಸಿಯಾದಲ್ಲಿರುವ ರಾಜಕಾಲುವೆಗೆ ಇಳಿದ ಪೊಲೀಸರ ತಂಡವು ಪ್ಲ್ಯಾಸ್ಟಿಕ್ ಕೈಚೀಲದಲ್ಲಿ ಕಟ್ಟಿ ಎಸೆದಿದ್ದ ದೇಶಿ ನಿರ್ಮಿತ ಪಿಸ್ತೂಲು ಸೇರಿ ಕೆಲ ವಸ್ತುಗಳನ್ನು ಪತ್ತೆ ಮಾಡಿದರು. ಪ್ರಮುಖ ಆರೋಪಿ, ರಘುವಂಶಿ ಪತ್ನಿ ಸೋನಮ್ ಉಳಿದುಕೊಂಡಿದ್ದ ಫ್ಲ್ಯಾಟ್ನಲ್ಲಿ ಇವು ನಾಪತ್ತೆಯಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಸೋನಮ್ ಮತ್ತು ರಘುವಂಶಿ ಮೇಘಾಲಯದಿಂದ ಮೇ 23ರಂದು ಮಧುಚಂದ್ರಕ್ಕೆ ಬಂದಿದ್ದಾಗ ಪ್ರಿಯಕರ ರಾಜ್ ಕುಶ್ವಾಹ ಜತೆ ಸೇರಿ ಸೋನಮ್ ಪತಿಯನ್ನು ಹತ್ಯೆ ಮಾಡಿಸಿದ್ದರು. ಜೂನ್ 2ರಂದು ಶವ ಪತ್ತೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.