ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜಸ್ಥಾನದಲ್ಲಿ ಮುಂದುವರಿದ ಮತದಾನ ಪ್ರಕ್ರಿಯೆ: ಪಿಂಕ್ ಬೂತ್‍ನಲ್ಲಿ ರಾಜೇ ಮತದಾನ

ಫಾಲೋ ಮಾಡಿ
Comments

ಜೋಧಪುರ: ರಾಜಸ್ಥಾನ ವಿಧಾನಸಭೆ ಚುನಾವಣೆ ಮತದಾನ ಶುಕ್ರವಾರ ಬೆಳಗ್ಗೆ 8ಗಂಟೆಗೆ ಆರಂಭವಾಗಿದೆ.ರಾಜಸ್ಥಾನದ 200 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಡಿಸೆಂಬರ್ 11ರಂದು ಫಲಿತಾಂಶ ಹೊರಬೀಳಲಿದೆ.

2274 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, 4.47 ಕೋಟಿ ಮತದಾರರು ಇಲ್ಲಿದ್ದಾರೆ.51, 687 ಮತಗಟ್ಟೆಗಳಲ್ಲಿ259 ಮತಗಟ್ಟೆಗಳನ್ನು ಮಹಿಳೆಯರೇ ನಿರ್ವಹಿಸುತ್ತಿದ್ದಾರೆ.

ಕಳೆದ ಬಾರಿ ರಾಜಸ್ಥಾನದಲ್ಲಿ ಬಿಜೆಪಿ 163 ಸ್ಥಾನ ಗೆದ್ದಿದ್ದು, ಕಾಂಗ್ರೆಸ್‍ಗೆ 21 ಸೀಟು ಲಭಿಸಿತ್ತು.

ಕ್ಷಣ ಕ್ಷಣದ ಸುದ್ದಿ

ಶರದ್ ಪವಾರ್ ಹೇಳಿಕೆಯಿಂದ ಅವಮಾನವಾಗಿದೆ : ರಾಜೇ

ಬಿಹಾರದ ಎಲ್‍ಜೆಡಿ ನಾಯಕ ಶರದ್ ಪವಾರ್ ಹೇಳಿಕೆಯಿಂದ ನನಗೆ ಅವಮಾನವಾಗಿದೆ.ಈ ಹೇಳಿಕೆಯಿಂದ ಮಹಿಳೆಯರಿಗೆ ಅವಮಾನವಾಗಿದೆ.ಈ ರೀತಿಯ ಮಾತುಗಳ ಮೇಲೆ ಚುನಾವಣಾ ಆಯೋಗ ಕ್ರಮ ತೆಗೆದುಕೊಂಡು ಭವಿಷ್ಯದಲ್ಲಿ ಪುನರಾವರ್ತಿಸದಂತೆ ನೋಡಿಕೊಳ್ಳಬೇಕು ಎಂದು ಎಎನ್‌‍ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ವಸುಂಧರಾ ರಾಜೇ ಹೇಳಿದ್ದಾರೆ.

ನಾವು ಆಮೇಲೆ ಚರ್ಚಿಸೋಣ

ಚುನಾವಣೆಯಲ್ಲಿ ನಮ್ಮ ಪಕ್ಷ ಬಹುಮತಗಳಿಸಿದರೆ ಆಮೇಲೆ ಕುಳಿತು ಚರ್ಚಿಸೋಣ ಎಂದು ರಾಜಸ್ಥಾನದ ಕಾಂಗ್ರೆಸ್ ಮುಖ್ಯಸ್ಥ ಸಚಿನ್ ಪೈಲೆಟ್ ಹೇಳಿದ್ದಾರೆ.

ಹರೀಶ್ ಚೌಧರಿ ಮತದಾನ
ಬೈತೋ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹರೀಶ್ ಚೌಧರಿ ಮತದಾನ ಮಾಡಿದ್ದಾರೆ

ವೈಶಾಲಿಯಲ್ಲಿ ರಾಥೋಡ್ ಮತದಾನ

ಜೈಪುರದ ವೈಶಾಲಿ ನಗರದ 252ನೇ ಸಂಖ್ಯೆಯ ಮತಗಟ್ಟೆಯಲ್ಲಿ ಸಂಸದ ರಾಜ್ಯವರ್ಧನ್ ಸಿಂಗ್ ರಾಥೋಡ್ ಮತ ಚಲಾಯಿಸಿದ್ದಾರೆ.

ಹಿರಿಯ ನಾಗರಿಕರಿಂದ ಮತದಾನ

ಜೋಧಪುರ ಜಿಲ್ಲೆಯ ಸರ್ದಾರ್‌ಪುರ ಕ್ಷೇತ್ರದ 103 ಸಂಖ್ಯೆಯ ಮತಗಟ್ಟೆಯಲ್ಲಿ ಮತದಾನ ಮಾಡಿದ 80 ಹರೆಯದ ಮಹಿಳೆ

ಪಿಂಕ್ ಬೂತ್‍ನಲ್ಲಿ ವಸುಂಧರಾ ರಾಜೇ ಮತದಾನ

ರಾಜಸ್ಥಾನ ಮುಖ್ಯಮಂತ್ರಿ ಝಲ್ರಾಪಟನ್ ಕ್ಷೇತ್ರದ ಬೂತ್ ಸಂಖ್ಯೆ 31Aಯಲ್ಲಿ ಮತದಾನ ಮಾಡಿದರು

ಮತದಾನಕ್ಕೆ ಮುನ್ನ ಪೂಜೆ

ರಾಜಸ್ಥಾನ ಗೃಹ ಸಚಿವ ಗುಲಾಬ್ ಚಂದ್ ಕಟಾರಿಯಾ ಮತದಾನಕ್ಕೆ ಮುನ್ನ ಉದಯಪುರದ ಶಿವ ದೇಗುಲದಲ್ಲಿ ಪೂಜೆ ಸಲ್ಲಿಸುತ್ತಿರುವುದು.

ಮತಯಂತ್ರದಲ್ಲಿ ದೋಷ
ಸರ್ದಾರ್‌ಪುರ್ ಕ್ಷೇತ್ರದಲ್ಲಿ ಅಶೋಕ್ ಗೆಹ್ಲೋಟ್ ಮತ ಚಲಾಯಿಸಿದ ನಂತರ ಇವಿಎಂ ಕೆಟ್ಟು ಹೋಗಿದೆ ಎಂದು ಬಲ್ಲಮೂಲಗಳು ವರದಿಮಾಡಿವೆ.

ಇವಿಎಂನಲ್ಲಿ ದೋಷ: ಮತದಾನ ಸ್ಥಗಿತ
ಕೋಟಾದ 157 ಸಂಖ್ಯೆಯ ಮತಗಟ್ಟೆಯಲ್ಲಿ ಇವಿಎಂನಲ್ಲಿ ದೋಷ ಕಂಡುಬಂದಿದ್ದರಿಂದ ಮತದಾನ ಸ್ಥಗಿತಗೊಳಿಸಲಾಗಿದೆ
****

ಮಾಜಿ ಮುಖ್ಯಮಂತ್ರಿ ಅಶೊಕ್‌ ಗೆಹ್ಲೋಟ್‌ ತವರು ಜಿಲ್ಲೆಯಾದ ಜೋಧಪುರದ 10 ಕ್ಷೇತ್ರಗಳನ್ನು ಪಡೆಯಲು ಕಾಂಗ್ರೆಸ್‌ ಹಾಗೂ ಬಿಜೆಪಿ ತೀವ್ರ ಸೆಣೆಸಾಟ ನಡೆಸಿವೆ.

2013ರ ಚುನಾವಣೆಯಲ್ಲಿ ಈ ಜಿಲ್ಲೆಯಲ್ಲಿ 9 ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದವು. ಈ ಬಾರಿ 10 ಕ್ಷೇತ್ರಗಳಲ್ಲೂ ಜಯಗಳಿಸಲು ಎಲ್ಲ ರೀತಿಯ ಪ್ರಯತ್ನ ಮುಂದುವರಿಸಿರುವ ಕಾಂಗ್ರೆಸ್‌, ಬಿಜೆಪಿಗೆ ಪ್ರಬಲ ಸ್ಪರ್ಧೆಯೊಡ್ಡಿದೆ.
ಎಂಟು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹೊಸ ಮುಖಗಳಿಗೆ ಟಿಕೆಟ್‌ ನೀಡಿದೆ. ಸರ್ದಾರಪುರ ಕ್ಷೇತ್ರದಿಂದ ಗೆಹ್ಲೋಟ್‌ ಮರು ಆಯ್ಕೆ ಬಯಸಿದ್ದಾರೆ. ಕಳೆದ ಬಾರಿ ಆಯ್ಕೆಯಾಗಿದ್ದ 9 ಶಾಸಕರನ್ನು ಬಿಜೆಪಿ ಮತ್ತೆ ಕಣಕ್ಕಿಳಿಸಿದೆ.

ಗೆಹ್ಲೋಟ್‌ ವಿರುದ್ಧ ಬಿಜೆಪಿ ಶಂಭು ಸಿಂಗ್‌ ಖೇತಾಸರ್‌ ಅವರನ್ನು ಮತ್ತೆ ಕಣಕ್ಕಿಳಿಸಿದೆ. ಕಳೆದ ಬಾರಿ ಖೇತಾಸರ್‌ 18,478 ಮತಗಳ ಅಂತರದಿಂದ ಗೆಹ್ಲೋಟ್‌ ಅವರ ವಿರುದ್ಧ ಸೋತಿದ್ದರು.

1998ರಿಂದ ಗೆಹ್ಲೋಟ್‌ ಅವರು ಸರ್ದಾರಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಇದು ಅವರ ಭದ್ರಕೋಟೆ. ಗೆಹ್ಲೋಟ್‌ ಅವರನ್ನು ಸೋಲಿಸಲು ಕಳೆದ ನಾಲ್ಕು ಚುನಾವಣೆಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕಿಳಿಸಿದ್ದರೂ, ಜಯಗಳಿಸಲು ಸಾಧ್ಯವಾಗಿಲ್ಲ.
ಜೋಧಪುರ್‌ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ರಾಜಕೀಯ ಕುಟುಂಬದ ಹಿನ್ನೆಲೆ ಇದ್ದವರಿಗೆ ಕಾಂಗ್ರೆಸ್‌ ಕಣಕ್ಕಿಳಿಸಿದೆ. ರಾಷ್ಟ್ರದ ಗಮನ ಸೆಳೆದಿದ್ದ ಭನ್ವಾರಿ ದೇವಿ ಕೊಲೆ ಪ್ರಕರಣದ ಆರೋಪಿಗಳಾದ ಮಹಿಪಾಲ್‌ ಮೆಡರ್ನಾ ಮತ್ತು ಮಲ್ಖನ್ ಸಿಂಗ್ ಬಿಷ್ಣೋಯಿ ಅವರ ಕುಟುಂಬದ ಸದಸ್ಯರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT