ಜೈಪುರ: ರಾಜಸ್ಥಾನದ ಕೋಟಾ ಜಿಲ್ಲೆ ವ್ಯಾಪ್ತಿಯ ಚಂಬಲ್ ನದಿಗೆ ಭಾನುವಾರ ಸೇತುವೆ ಮೇಲಿನಿಂದ ಕಾರು ಬಿದ್ದಿದ್ದು, ಎಂಟು ಮಂದಿ ಸ್ಥಳದಲ್ಲೇಮೃತಪಟ್ಟಿದ್ದಾರೆ.

ಮೃತರು ಕೋಟಾದಿಂದ ಉಜ್ಜಯಿನಿಗೆ ಮದುವೆ ಸಮಾರಂಭಕ್ಕೆ ಹೋಗುತ್ತಿದ್ದರು ಎಂದು ವರದಿಯಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಕಾರು ಸೇತುವೆಯಿಂದ ನೇರವಾಗಿ ನದಿಗೆ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ಎಲ್ಲಾ ಎಂಟು ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ಕೋಟಾ ಎಸ್‌ಪಿ ಕೇಸರ್ ಸಿಂಗ್ ಶೇಖಾವತ್ ತಿಳಿಸಿದ್ದಾರೆ.

ಕ್ರೇನ್ ಸಹಾಯದಿಂದ ಕಾರನ್ನು ನದಿಯಿಂದ ಹೊರತೆಗೆಯಲಾಗಿದೆ. ಮೃತದೇಹಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹೇಳಿದ್ದಾರೆ.

ಓದಿ... ಸುಳ್ಳು ಮಾಹಿತಿ ನೀಡಿ ಬಾರ್ ಲೈಸನ್ಸ್ ಪಡೆದ ಸಮೀರ್ ವಾಂಖೆಡೆ: ಎಫ್ಐಆರ್ ದಾಖಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.