ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ | ಮಕ್ಕಳು ತನ್ನವಲ್ಲ ಎಂದು ಶಂಕಿಸಿ ಕೊಲೆ ಮಾಡಿದ ತಂದೆ; ಬಂಧನ

Published 27 ಮಾರ್ಚ್ 2024, 3:50 IST
Last Updated 27 ಮಾರ್ಚ್ 2024, 3:50 IST
ಅಕ್ಷರ ಗಾತ್ರ

ಜೈಪುರ (ರಾಜಸ್ಥಾನ): ಮಕ್ಕಳು ತನ್ನವಲ್ಲ ಎಂದು ಶಂಕಿಸಿದ ತಂದೆಯೊಬ್ಬ ಇಬ್ಬರು ಮಕ್ಕಳನ್ನು ಹಾಗೂ ತನ್ನ ಅಜ್ಜಿಯನ್ನು ಕೊಲೆ ಮಾಡಿರುವ ಪ್ರಕರಣ ಚುರು ಜಿಲ್ಲೆಯಲ್ಲಿ ವರದಿಯಾಗಿದೆ. ಆರೋಪಿ ತಂದೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಭೂಪ್‌ ಸಿಂಗ್‌ (32) ಬಂಧಿತ ಆರೋಪಿ. ಈತ ಭೈನ್ಸಿ ಗ್ರಾಮದಲ್ಲಿ ತನ್ನ ಅಜ್ಜಿಯನ್ನು ಜನವರಿ 31ರಂದು ಹಾಗೂ ಮಕ್ಕಳಾದ ಗರ್ವಿತ್‌ (4) ಹಾಗೂ ಅನುರಾಗ್‌ (8) ಅವರನ್ನು ಫೆಬ್ರುವರಿ 13ರಂದು ವಿಷ ಹಾಕಿ ಕೊಲೆ ಮಾಡಿದ್ದಾನೆ ಎಂದು ಚುರು ಪೊಲೀಸ್‌ ಸೂಪರಿಂಟೆಂಡೆಂಟ್‌ ಜೈ ಯಾದವ್‌ ಹೇಳಿದ್ದಾರೆ.

ತಿಂಗಳ ಅವಧಿಯಲ್ಲಿ ಮೂವರು ಮೃತಪಟ್ಟಿದ್ದರಿಂದ ಅನುಮಾನ ಮೂಡಿತ್ತು. ಹೀಗಾಗಿ, ಪೊಲೀಸರು ಪ್ರಕರಣದ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು ಎಂದಿದ್ದಾರೆ.

ಮಕ್ಕಳ ಶವಗಳನ್ನು ಸಮಾಧಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಗರ್ವಿತ್‌ ದೇಹದಲ್ಲಿ ವಿಷದ ಅಂಶ ಪತ್ತೆಯಾದ ಕಾರಣ, ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಯಿತು.

ಮಕ್ಕಳು ತನ್ನವಲ್ಲ ಎಂಬ ಅನುಮಾನ ಮೂಡಿತ್ತು. ಹಾಗಾಗಿ ಕೊಲೆ ಮಾಡಲು ನಿರ್ಧರಿಸಿದೆ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿರುವ ಆರೋಪಿ, ಅನುಮಾನ ಬರದಂತೆ ನೋಡಿಕೊಳ್ಳುವ ಸಲುವಾಗಿ, ಮೊದಲು ತನ್ನ ಅಜ್ಜಿಯನ್ನು ನಂತರ ಮಕ್ಕಳನ್ನು ಕೊಲೆ ಮಾಡಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಆರೋಪಿಯು ನರ್ಸಿಂಗ್ ಓದಿದ್ದು, ಮೆಡಿಕಲ್‌ ಸ್ಟೋರ್‌ ಹೊಂದಿದ್ದಾನೆ ಎಂಬುದೂ ವಿಚಾರಣೆ ವೇಳೆ ಗೊತ್ತಾಗಿದೆ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT