ಜೈಪುರ: ಹೆಂಡತಿಯನ್ನು ದರೋಡೆಕೋರರು ಕೊಂದಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದ ಗಂಡನೇ ನಿಜವಾದ ಕೊಲೆಗಾರನಾಗಿರುವ ಘಟನೆಯು ರಾಜಸ್ಥಾನದ ಕಿಶನ್ಗಢದಲ್ಲಿ ಜರುಗಿದೆ.

ಭಾನುವಾರ ರಾತ್ರಿ ಗಂಭೀರ ಗಾಯಗೊಂಡ ಹೆಂಡತಿಯೊಂದಿಗೆ ಕಿಶನ್ಗಢದ ಸರ್ಕಾರಿ ಆಸ್ಪತ್ರೆಗೆ ರೋಹಿತ್ ಸೈನಿ(35) ಎನ್ನುವವರು ದಾಖಲಾಗಿದ್ದರು. ಅವರಿಗೂ ಚಿಕ್ಕಪುಟ್ಟ ಗಾಯವಾಗಿತ್ತು. ಆ ವೇಳೆಗಾಗಲೇ ಅವರ ಹೆಂಡತಿ ಸಂಜು(33) ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

ಕೆಲವು ಅಪರಿಚಿತರು ತನ್ನ ಹೆಂಡತಿಯ ಮೇಲೆ ದಾಳಿ ಮಾಡಿದ್ದರು ಎಂದು ರೋಹಿತ್ ಸೈನಿ ದೂರು ದಾಖಲಿಸಿದ್ದರು.

ಪ್ರಕರಣದ ಪ್ರಾಥಮಿಕ ತನಿಖೆಯ ವೇಳೆ ರೋಹಿತ್ ಸೈನಿ ಅವರು ಘಟನೆಯ ಕುರಿತು ಹೇಳಿರುವುದು ಸುಳ್ಳು ಎಂದು ಪತ್ತೆಯಾಗಿದೆ. ಅವರ ಹೇಳಿಕೆಗಳು ಪ್ರಕರಣದ ದಿಕ್ಕು ತಪ್ಪಿಸುವಂತಿತ್ತು. ತನಿಖೆಯ ವೇಳೆ, ಗಂಡನೇ ಹೆಂಡತಿಯ ಮೇಲೆ ಹಲ್ಲೆ ಮಾಡಿ, ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ ಎನ್ನುವುದು ಸಾಬೀತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯಾವ ಕಾರಣಕ್ಕಾಗಿ ಕೊಲೆ ಮಾಡಿದ್ದಾರೆ ಎನ್ನುವುದು ತಿಳಿದುಬಂದಿಲ್ಲ. ಪ್ರಕರಣದ ಕುರಿತು ಹೆಚ್ಚಿನ ತನಿಖೆಯಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.