ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ಜನವರಿಯಲ್ಲಿ ರಾಮ ಮಂದಿರ ಉದ್ಘಾಟನೆ: ಭರದಿಂದ ಸಾಗಿದೆ ಕಾಮಗಾರಿ

Published 25 ಮೇ 2023, 4:24 IST
Last Updated 25 ಮೇ 2023, 4:24 IST
ಅಕ್ಷರ ಗಾತ್ರ

ಲಖನೌ: ರಾಮ ಮಂದಿರವನ್ನು ಮುಂದಿನ ವರ್ಷ ಜನವರಿ ವೇಳೆಗೆ ಉದ್ಘಾಟನೆ ಮಾಡಲು ಉದ್ದೇಶಿಸಲಾಗಿದ್ದು, ಹೀಗಾಗಿ ಉತ್ತರ ಪ್ರದೇಶ ಸರ್ಕಾರವು ಅಯೋಧ್ಯೆಯ ಏರ್‌ಪೋರ್ಟ್‌ ಹಾಗೂ ರೈಲು ನಿಲ್ದಾಣದ ಕಾಮಗಾರಿಗಳನ್ನು ಚುರುಕುಗೊಳಿಸಿದೆ.

ಶಹಾದತ್‌‌ಗಂಜ್‌ನಿಂದ ನಯಾಘಾಟ್‌ಗೆ ಸಂಪರ್ಕ ಕಲ್ಪಿಸುವ 13 ಕಿ.ಮಿ ಉದ್ದ ರಾಮಪಥ ರಸ್ತೆ ಕಾಮಗಾರಿಯೂ ಪ್ರಗತಿಯಲ್ಲಿದೆ. ಜತೆಗೆ ರಾಮಜಾನಕಿ ಪಥ ಹಾಗೂ ಭಕ್ತಿ ಪಥ ನಿರ್ಮಾಣದ ರೂಪುರೇಷೆ ತಯಾರಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ. ಏರ್‌ಪೋರ್ಟ್‌ ಹಾಗೂ ರೈಲ್ವೇ ನಿಲ್ದಾಣವನ್ನು ವಿಸ್ತರಣೆ ಮಾಡಲಾಗುತ್ತಿದೆ ಎಂದು ಅದರಲ್ಲಿ ಹೇಳಲಾಗಿದೆ.

ಶ್ರೀರಾಮಜನ್ಮಭೂಮಿ ಹಾಗೂ ಹನುಮಾನ್‌ ಗಢಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವುದರಿಂದ ರಸ್ತೆ ಹಾಗೂ ಕಾರಿಡಾರ್‌ಗಳು ಮುಖ್ಯವಾಗಿದ್ದು, ರಾಮಜನ್ಮಭೂಮಿ ಪಥ 30 ಮೀಟರ್ ಇರಲಿದ್ದು, ಭಕ್ತಿ ಪಥದ ಅಗಳ 14 ಮೀಟರ್‌ ಇರಲಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ರಾಮ ಮಂದಿರ ಉದ್ಘಾಟನೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಜನರನ್ನು ಆಹ್ವಾನಿಸಿದ್ದು, ಎಲ್ಲಾ ಕಾಮಗಾರಿಗಳನ್ನು ಆಗಾಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಅದರಲ್ಲಿ ಹೇಳಲಾಗಿದೆ.

ರಾಮ ಮಂದಿರದ ಕಾಮಗಾರಿಗಳು ವೇಗವಾಗಿ ನಡೆಯುತ್ತಿದ್ದು, ಸಾಧು ಸಂತರ ಅನುಮತಿ ಪಡೆದು ಮುಂದಿನ ವರ್ಷ ಜನವರಿಯಲ್ಲಿ ಉದ್ಘಾಟನೆಯಾಗುವ ಸಾಧ್ಯತೆ ಇದೆ ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ನ್ಯಾಸ್ ಇದರ ಕಾರ್ಯದರ್ಶಿ ಚಂಪತ್‌ ರೈ ಅವರು ಹೇಳಿದ್ದಾರೆ.

ಉದ್ಘಾಟನಾ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಕಾಮಗಾರಿಗಳು ಭರದಿಂದ ಸಾಗಿದ್ದು, ಡಿಸೆಂಬರ್‌ 31 ರಿಂದ ಜನವರಿ 15ರ ಒಳಗೆ ಉದ್ಘಾಟನೆಯಾಗಬಹುದು‘ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT