ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಪ್ರಕರಣ: ಡೇರಾ ಸಚ್ಚಾ ಸೌದದ ಗುರ್ಮಿತ್ ಫರ್ಲೊ ಮೇಲೆ ಜೈಲಿನಿಂದ ಹೊರಕ್ಕೆ

Published 20 ನವೆಂಬರ್ 2023, 14:09 IST
Last Updated 20 ನವೆಂಬರ್ 2023, 14:09 IST
ಅಕ್ಷರ ಗಾತ್ರ

ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌದಾದ ಗುರ್ಮಿತ್ ರಾಮ್ ರಹೀಮ್‌ ಸಿಂಗ್‌ಗೆ 21 ದಿನಗಳ ಕಾಲ ಜೈಲಿನಿಂದ ಫರ್ಲೊ ಮೇಲೆ ಹೊರಕ್ಕಿಡಲು ಜೈಲು ಅಧಿಕಾರಿ ಆದೇಶಿಸಿದ್ದಾರೆ.

ನಿರ್ದಿಷ್ಟ ಕಾರಣದಡಿ 2022ರ ಅಕ್ಟೋಬರ್ ಹಾಗೂ 2023ರ ಜನವರಿಯಲ್ಲಿ 40 ದಿನಗಳ ಕಾಲ ಪೆರೋಲ್‌ ಮೇಲೆ ರಾಮ್‌ ರಹೀಮ್ ಹೊರಗಿದ್ದರು. ಇದಾದ ನಂತರ ಇದೀಗ 21 ದಿನಗಳ ಕಾಲ ಜೈಲೇ ಇವರನ್ನು ಹೊರಗಿಡಲು ನಿರ್ಧರಿಸಿದೆ.

ಹರಿಯಾಣದ ಸುನರಿಯಾ ಜೈಲಿನಲ್ಲಿದ್ದ ಇವರು, ಫರ್ಲೊ ಅವಧಿಯಲ್ಲಿ ಉತ್ತರ ಪ್ರದೇಶದ ಬಘ್ಪಟ್‌ನಲ್ಲಿರುವ ಆಶ್ರಮದಲ್ಲಿ ಇರಲಿದ್ದಾರೆ.

ಕಳೆದ ಬಾರಿ ಪರೋಲ್‌ ಮೇಲೆ ಹೊರಗೆ ಬಂದಿದ್ದ ರಾಮ ರಹೀಮ್‌ ತನ್ನ ಜನ್ಮದಿನದಂದು ತಲ್ವಾರ್ ಬಳಸಿ ಕೇಕ್‌ ಕತ್ತರಿಸಿದ್ದು ಭಾರೀ ಸುದ್ದಿಯಾಗಿತ್ತು. ಸಿರ್ಸಾ ಸ್ಥಾನಿಕ ಮುಖ್ಯಸ್ಥರೊಬ್ಬರು ಹಲವು ಬಾರಿ ಆನ್‌ಲೈನ್ ವೇದಿಕೆಯಲ್ಲಿ ಸತ್ಸಂಗ ಕಾರ್ಯಕ್ರಮ ಆಯೋಜಿಸಿದ್ದೂ ಚರ್ಚೆಗೆ ಕಾರಣವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT