ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತನಾಗ್‌–ರಾಜೌರಿ ಕ್ಷೇತ್ರದಲ್ಲಿ ದಾಖಲೆ ಮತದಾನ: ಪ್ರಧಾನಿ ಅಭಿನಂದನೆ

Published 27 ಮೇ 2024, 23:53 IST
Last Updated 27 ಮೇ 2024, 23:53 IST
ಅಕ್ಷರ ಗಾತ್ರ

ನವದೆಹಲಿ: ಜಮ್ಮು–ಕಾಶ್ಮೀರದ ಅನಂತನಾಗ್‌–ರಾಜೌರಿ ಲೋಕಸಭಾ ಕ್ಷೇತ್ರದಲ್ಲಿ ದಾಖಲೆ ಮತದಾನಕ್ಕೆ ಕಾರಣರಾದ ಮತದಾರರಿಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. 

ಈ ಬಗ್ಗೆ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ, ‘ಲೋಕಸಭಾ ಚುನಾವಣೆಯ ದಾಖಲೆ ಮತದಾನಕ್ಕಾಗಿ ಅನಂತನಾಗ್–ರಾಜೌರಿಯ ನನ್ನ ಸೋದರರಿಗೆ ಹಾಗೂ ಸೋದರಿಯರಿಗೆ ವಿಶೇಷ ಅಭಿನಂದನೆಗಳು. ನಿಮ್ಮ ಉತ್ಸಾಹದ ಪಾಲ್ಗೊಳ್ಳುವಿಕೆಯು ಪ್ರಜಾಪ್ರಭುತ್ವವಾದಿ ಚೈತನ್ಯದ ರೋಮಾಂಚಕ ಪುರಾವೆ’ ಎಂದು ಉಲ್ಲೇಖಿಸಿದ್ದಾರೆ. 

ಮೇ 25ರಂದು ಆರನೇ ಹಂತದಲ್ಲಿ ಚುನಾವಣೆ ನಡೆದಿದ್ದ ಕ್ಷೇತ್ರದಲ್ಲಿ ಶೇ 54.84ರಷ್ಟು ಮತದಾನವಾಗಿತ್ತು. ಇದು ಇತ್ತೀಚಿನ ದಶಕಗಳಲ್ಲಿಯೇ ಅತ್ಯುತ್ತಮವಾದ ಮತದಾನ ಪ್ರಮಾಣ ಎನ್ನಲಾಗಿದೆ.

ಕಾಶ್ಮೀರ ಕಣಿವೆಯಲ್ಲಿ ಜನ ಅತ್ಯುತ್ಸಾಹದಿಂದ ಮತದಾನದಲ್ಲಿ ಭಾಗವಹಿಸಿದ್ದು, ಈ ಹಿಂದೆ ಕಡಿಮೆ ಮತದಾನವಾಗುತ್ತಿದ್ದಂಥ ಪ್ರದೇಶಗಳಲ್ಲಿಯೂ ಉತ್ತಮ ಮತ ಪ್ರಮಾಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT