ನವದೆಹಲಿ: ಕೆಂಪು ಕೋಟೆ ಬಳಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತರೊಂದಿಗೆ ನಂಟು ಹೊಂದಿದೆ ಎನ್ನಲಾದ ಮೂರನೇ ಕಾರಿಗಾಗಿ ಭದ್ರತಾ ಸಂಸ್ಥೆಗಳು ಶೋಧ ನಡೆಸುತ್ತಿವೆ ಎಂದು ಪೊಲೀಸ್ ಮೂಲಗಳು ಗುರುವಾರ ತಿಳಿಸಿವೆ.

ಸೋಮವಾರ ಸಂಜೆ ಕೆಂಪು ಕೋಟೆಯ ಬಳಿ ಬಿಳಿ ಬಣ್ಣದ ಹುಂಡೈ ಐ20 ಕಾರು ಸ್ಫೋಟಗೊಂಡು 12 ಜನ ಮೃತಪಟ್ಟು 30 ಮಂದಿ ಗಾಯಗೊಂಡಿದ್ದರು.

ಘಟನೆ ಬಳಿಕ ತೀವ್ರ ಶೋಧ ನಡೆಸಿದ್ದ ತನಿಖಾಧಿಕಾರಿಗಳು ಸ್ಫೋಟಗೊಂಡ ಕಾರನ್ನು ಓಡಿಸುತ್ತಿದ್ದ ಡಾ. ಉಮರ್ ನಬಿ ಮಾಲೀಕತ್ವದ ಕೆಂಪು ಬಣ್ಣದ ‘ಫೋರ್ಡ್ ಎಕೋಸ್ಪೋರ್ಟ್’ ಕಾರನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದರು. ಫರೀದಾಬಾದ್ ಬಳಿ ಈ ಕಾರು ಪತ್ತೆಯಾಗಿತ್ತು. ಇದು ಪ್ರಕರಣದಲ್ಲಿ ಬಳಸಿರುವ 2ನೇ ಕಾರು ಎನ್ನಲಾಗಿದೆ.

ಹುಂಡೈ ಐ20 ಕಾರಿನ ಜತೆಗೆ ‘ಫೋರ್ಡ್ ಎಕೋಸ್ಪೋರ್ಟ್’ ಕಾರನ್ನೂ ಸ್ಫೋಟಕ್ಕೆ ಬಳಸುವ ಸಂಚನ್ನು ಉಮರ್ ಮಾಡಿರಬಹುದು ಎಂಬ ಶಂಕೆಯಿದೆ. ಈ ದಿಸೆಯಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

ಇದೀಗ ಶಂಕಿತರೊಂದಿಗೆ ನಂಟಿದೆ ಎಂದು ಶಂಕಿಸಲಾದ ಮಾರುತಿ ಬ್ರೆಜಾ(3ನೇ ಕಾರು) ಇನ್ನೂ ಪತ್ತೆಯಾಗಿಲ್ಲ. ಈ ಕಾರನ್ನು ಆರೋಪಿಗಳು ಸ್ಥಳ ಪರೀಶೀಲನೆ ನಡೆಸಲು ಅಥವಾ ತಪ್ಪಿಸಿಕೊಳ್ಳಲು ಬಳಸಿದ್ದಾರೆಂದು ಶಂಕಿಸಲಾಗಿದೆ.

ದೆಹಲಿ-ಎನ್ಸಿಆರ್ ಮತ್ತು ಪಕ್ಕದ ರಾಜ್ಯಗಳಲ್ಲಿ ಮಾರುತಿ ಬ್ರೆಜಾ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
.Delhi Blast| ಕಾರು ಚಲಾಯಿಸುತ್ತಿದ್ದದ್ದು ಡಾ.ಉಮರ್ ನಬಿ: DNA ಪರೀಕ್ಷೆಯಲ್ಲಿ ದೃಢ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.