ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಕ್ಕಿಂನಲ್ಲಿ ಹಿಮಪಾತ: ಮುಂದುವರಿದ ರಕ್ಷಣಾ ಕಾರ್ಯಾಚರಣೆ

Last Updated 5 ಏಪ್ರಿಲ್ 2023, 11:08 IST
ಅಕ್ಷರ ಗಾತ್ರ

ಸಿಕ್ಕಿಂ : ಇಲ್ಲಿನ ನಾಥುಲಾದಲ್ಲಿ ಮಂಗಳವಾರ ಭಾರಿ ಹಿಮಪಾತ ಉಂಟಾಗಿದ್ದು, ಪ್ರತಿಕೂಲ ಹವಮಾನದಿಂದ ಸ್ಥಗಿತಗೊಂಡಿದ್ದ ರಕ್ಷಣಾ ಕಾರ್ಯಾಚರಣೆಯನ್ನು ಬುಧವಾರ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಕ್ಕಿಂನ ನಾಥುಲಾ ಪ್ರದೇಶದ ಜವಹಾರ್‌ಲಾಲ್‌ ನೆಹರೂ ಮಾರ್ಗದಲ್ಲಿ ಮಂಗಳವಾರ ಬೆಳಿಗ್ಗೆ 11.30ರ ಹೊತ್ತಿಗೆ ಹಿಮಪಾತ ಸಂಭವಿಸಿತ್ತು. ಇದೇ ವೇಳೆ ಸುಮಾರು 30 ಪ್ರವಾಸಿಗರಿದ್ದ ಐದಾರು ವಾಹನಗಳು ಹಿಮಾಪತಕ್ಕೆ ಸಿಲುಕಿಕೊಂಡಿದ್ದವು. ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು 23 ಜನರನ್ನು ರಕ್ಷಿಸಿದ್ದರು. ಮಹಿಳೆ ಒಂದು ಮಗು ಸೇರಿ 7 ಜನರು ಹಿಮಪಾತದಲ್ಲಿ ಅಸುನೀಗಿದ್ದರು.

‘ಇದೇ ಮಾರ್ಗದ 15ನೇ ಮೈಲಿಯಲ್ಲಿ ಯಾರಾದರೂ ಪ್ರವಾಸಿಗರು ಸಿಲುಕಿಕೊಂಡಿದ್ದಾರೆಯೇ ಎಂದು ಪರೀಕ್ಷಿಸಲು ಇಂದು(ಬುಧವಾರ) ಬೆಳಿಗ್ಗೆಯಿಂದಲೇ ರಕ್ಷಣಾ ಕಾರ್ಯಾಚರಣೆ ನಡೆಸಿದ್ದೇವೆ. ಕಾರ್ಯಾಚರಣೆ ನಡೆಯತ್ತಿದ್ದು, ಮುಗಿದ ತಕ್ಷಣ ವರದಿ ನೀಡಲಾಗುವುದು’ ಎಂದು ಪೂರ್ವ ಸಿಕ್ಕಿಂನ ಜಿಲ್ಲಾಧಿಕಾರಿ ತುಷಾರ್ ನಿಖಾನೆ ದೂರವಾಣಿಯ ಮೂಲಕ ತಿಳಿಸಿದ್ದಾರೆಂದು ಪಿಟಿಐ ವರದಿ ಮಾಡಿದೆ.

ಹಿಮಪಾತದಲ್ಲಿ ಗಾಯಗೊಂಡಿದ್ದ 13 ಜನರನ್ನು ಎಸ್‌ಟಿಎನ್‌ಎಮ್‌ ಆಸ್ಪತ್ರೆಗೆ ದಾಖಲಿಸಿದ್ದು, ಅದರಲ್ಲಿ 9 ಜನರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಉಳಿದ ನಾಲ್ಕು ಜನರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಮಂಗಳವಾರ ರಾತ್ರಿ ಆಸ್ಪತ್ರೆಗೆ ಭೇಟಿ ನೀಡಿದ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್‌ ಸಿಂಗ್‌ ತಮಂಗ್‌ ಗಾಯಗೊಂಡವರ ಯೋಗ ಕ್ಷೇಮ ವಿಚಾರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT