ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಾಗಿ 4ದಶಕಗಳಿಂದ ಬೇಡಿಕೆ; ಸಿಗದ ಮನ್ನಣೆ: ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ

Published 28 ಮಾರ್ಚ್ 2024, 12:45 IST
Last Updated 28 ಮಾರ್ಚ್ 2024, 12:45 IST
ಅಕ್ಷರ ಗಾತ್ರ

ಗೋಪೇಶ್ವರ (ಉತ್ತರಾಖಂಡ್‌): ಗ್ರಾಮಕ್ಕೆ ಸರಿಯಾದ ರಸ್ತೆ ನಿರ್ಮಿಸುವಂತೆ ಕಳೆದ ನಾಲ್ಕು ದಶಕಗಳ ಬೇಡಿಕೆ ಈವರೆಗೂ ಈಡೇರದ್ದಕ್ಕೆ ನೊಂದಿರುವ ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯ ದಮಕ್ ಗ್ರಾಮಸ್ಥರು ಈ ಬಾರಿ ಲೋಕಸಭಾ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ

ಚಮೋಲಿ ಜಿಲ್ಲೆಯ ಅತಿ ದೂರದ ಊರು ದಮಕ್‌

ನಿರ್ಮಾಣ ಸಂಸ್ಥೆಗಳು ರಸ್ತೆ ನಿರ್ಮಿಸಲು ಬೇಕಾದ ಸಾಮಾನುಗಳನ್ನು ಹಳ್ಳಿಗೆ ತಂದು ಹಾಕಿ ಆಶಾಭಾವನೆ ಮೂಡಿಸಿದ್ದರು, ಆದರೆ ಅಷ್ಟರಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾದ ಕಾರಣ ಕೆಲಸವನ್ನು ಕೈಬಿಟ್ಟಿದ್ದಾರೆ.

ಈ ಪ್ರದೇಶದ ಹಲವು ಹಳ್ಳಿಗಳ ಜನರು ಒಟ್ಟಾಗಿ ಜಂಟಿ ಹೋರಾಟ ಸಮಿತಿಯನ್ನು ರೂಪಿಸಿಕೊಂಡಿದ್ದು, ಸಿಂಡ್‌ನಿಂದ ದಮಕ್‌ ಮತ್ತು ಕಲ್ಗೋಟ್‌ವರೆಗೆ ರಸ್ತೆ ನಿರ್ಮಿಸಿಕೊಡುವಂತೆ ಆಗ್ರಹಿಸಿದ್ದಾರೆ.

ಈ ಪ್ರದೇಶದ ಜನರು 1990ರಿಂದ ಇದುವರೆಗೆ ಎರಡು ಬಾರಿ ಚುನಾವಣೆ ಬಹಿಷ್ಕರಿಸಿದ್ದಾರೆ ಎಂದು ಸಮಿತಿಯ ಮುಖ್ಯಸ್ಥ ಪ್ರೇಮ್‌ ಸಿಂಗ್‌ ಸನ್ವಾಲ್‌ ತಿಳಿಸಿದ್ದಾರೆ.

2019ರ ಲೋಕಸಭಾ ಚುನಾವಣೆಯನ್ನೂ ಬಹಿಷ್ಕರಿಸಲು ನಿರ್ಧರಿಸಲಾಗಿತ್ತು, ಆದರೆ ಮತದಾನಕ್ಕೂ ಒಂದು ವಾರ ಮೊದಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರಸ್ತೆ ನಿರ್ಮಿಸಲು ಯಂತ್ರಗಳನ್ನು ಊರಿಗೆ ಕಳುಹಿಸಲಾಗಿತ್ತು, ಚುನಾವಣೆ ಮುಗಿಯುತ್ತಿದ್ದಂತೆ ಮರಳಿ ಅವುಗಳನ್ನು ಸಾಗಿಸಲಾಯಿತು. ಈಗ ಐದು ವರ್ಷ ಕಳೆದರೂ ರಸ್ತೆ ನಿರ್ಮಾಣದ ಬಗ್ಗೆ ಸುದ್ದಿಯಿಲ್ಲ ಎಂದು ಸನ್ವಾಲ್‌ ಹೇಳಿದ್ದಾರೆ.

ಅಲ್ಲದೆ ಜನವರಿಯಲ್ಲಿ ಪ್ರತಿಭಟನೆ ನಡೆಸಿದ್ದೆವು ಆಗ, ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರು ರಸ್ತೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರು, ಆದರೆ ಈವರೆಗೂ ಕೆಲಸ ಆರಂಭಗೊಂಡಿಲ್ಲ. ಜಿಲ್ಲಾ  ನ್ಯಾಯಾಧೀಶರಿಗೆ ಚುನಾವಣೆ ಬಹಿಷ್ಕಾರದ ಬಗ್ಗೆ ಲಿಖಿತ ಪತ್ರವನ್ನೂ ಸಲ್ಲಿಸಲಾಗಿದೆ, ಅವರಿಂದ ಉತ್ತರ ಇನ್ನಷ್ಟೇ ಬರಬೇಕಿದೆ ಎಂದು ಸನ್ವಾಲ್‌ ವಿವರಿಸಿದ್ದಾರೆ.

ಚಮೋಲಿ ಜಿಲ್ಲೆಯು ಗಡವಾಲ್‌ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿದ್ದು, ಬಿಜೆಪಿಯ ತಿರತ್‌ ಸಿಂಗ್‌ ರಾವತ್‌ ಅವರು ಸಂಸದರಾಗಿದ್ದಾರೆ. ಈ ಬಾರಿ ಈ ಕ್ಷೇತ್ರದಿಂದ ಅನಿಲ್‌ ಬಲುನಿ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT