ತಿರುವನಂತಪುರಂ: ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವ ಸುರೇಶ್ ಗೋಪಿ ನಟನೆಯ ‘ಜಾನಕಿ ವರ್ಸಸ್ ಸ್ಟೇಟ್ ಆಫ್ ಕೇರಳ’ ಸಿನಿಮಾ ಬಿಡುಗಡೆಗೆ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ(ಸಿಬಿಎಫ್ಸಿ) ಅನುಮತಿ ನಿರಾಕರಿಸಿದೆ. ಪುರಾಣದ ಪ್ರಕಾರ, ಭಗವಾನ್ ಶ್ರೀರಾಮನ ಹೆಂಡತಿ ‘ಸೀತೆ’ಯ ಮತ್ತೊಂದು ಹೆಸರು ‘ಜಾನಕಿ’ ಆಗಿರುವ ಕಾರಣ ಸಿಬಿಎಫ್ಸಿ ಈ ನಿರ್ಧಾರಕ್ಕೆ ಬಂದಿದೆ.

ಈ ಸಿನಿಮಾದಲ್ಲಿ ಸುರೇಶ್ ಅವರು ವಕೀಲನ ಪಾತ್ರ ನಿರ್ವಹಿಸಿದ್ದರೆ, ನಟಿ ಅನುಪಮಾ ಪರಮೇಶ್ವರನ್ ‘ಜಾನಕಿ’ ಪಾತ್ರ ನಿರ್ವಹಿಸಿದ್ದಾರೆ.

‘ಸಿಬಿಎಫ್ಸಿ ಜಾನಕಿ ಸಿನಿಮಾ ಬಿಡುಗಡೆಗೆ ಅನುಮತಿ ನಿರಾಕರಿಸಿದೆ. ಹೀಗಾಗಿ ಜೂನ್ 27ರಂದು ಸಿನಿಮಾ ಬಿಡುಗಡೆಯಾಗುವುದಿಲ್ಲ’ ಎಂದು ಸಿನಿಮಾ ನಿರ್ಮಾಪಕ ಹಾಗೂ ನಿರ್ದೇಶಕ ಪ್ರವೀಣ್ ನಾರಾಯಣ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಕುರಿತು ಸಿಬಿಎಫ್ಸಿ ಅಧಿಕಾರಿಗಳು ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ. ಕೇರಳ ಸಿನಿಮಾ ಕಾರ್ಮಿಕರ ಒಕ್ಕೂಟ (ಎಫ್ಇಎಫ್ಕೆಎ) ಸಿಬಿಎಫ್ಸಿ ನಡೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

‘ಸಿನಿಮಾದ ಪಾತ್ರದಲ್ಲಿ ಜಾನಕಿ ಹೆಸರು ಬಳಸದಂತೆ ಮೌಖಿಕವಾಗಿ ಸೂಚಿಸಿದೆ. ಆದರೆ, ಇಡೀ ಸಿನಿಮಾದಲ್ಲಿಯೇ ಆ ಹೆಸರು ತೆಗೆದುಹಾಕಬೇಕು ಎಂದು ಸಿಬಿಎಫ್ಸಿ ಬಯಸುತ್ತಿದೆ’ ಎಂದು ಎಫ್ಇಎಫ್ಕೆಎ ಪ್ರಧಾನ ಕಾರ್ಯದರ್ಶಿ ಬಿ.ಉನ್ನಿಕೃಷ್ಣನ್ ತಿಳಿಸಿದರು.

‘ಈ ಕುರಿತು ಸುರೇಶ್ ಗೋಪಿ ಜೊತೆಗೂ ಮಾತುಕತೆ ನಡೆಸಿದ್ದೇನೆ. ಅವರು ಕೂಡ ಮಧ್ಯಪ್ರವೇಶಿಸಿದರೂ, ಸಿಬಿಎಫ್ಸಿ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ’ ಎಂದರು.

‘ಈ ಕುರಿತು ಸಿನಿಮಾ ನಿರ್ಮಾಪಕರು ಕಾನೂನು ಹೋರಾಟ ನಡೆಸುವುದು ಉತ್ತಮ’ ಎಂದು ಉನ್ನಿಕೃಷ್ಣನ್ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.