ನವದೆಹಲಿ: ತಮ್ಮ ಪಕ್ಷವನ್ನು ಆರ್ಎಸ್ಎಸ್ಗೆ ಹೋಲಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ, ಆರ್ಎಸ್ಎಸ್ ವಿರುದ್ಧ ವ್ಯವಸ್ಥಿತವಾಗಿ ಹೋರಾಡುತ್ತಿರುವುದಾಗಿ ಹೇಳಿದ್ದಾರೆ.

ಇಂದು (ಶನಿವಾರ, ಜುಲೈ 19) ನಿಗದಿಯಾಗಿರುವ ಇಂಡಿಯಾ ಒಕ್ಕೂಟದ ಸಭೆ ಹಿನ್ನೆಲೆಯಲ್ಲಿ ಶುಕ್ರವಾರ ವಾಗ್ದಾಳಿ ನಡೆಸಿರುವ ಬೇಬಿ, ಎಡಪಕ್ಷಗಳ ಬೆಂಬಲ ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷವು 2004ರಲ್ಲಿ ಸರ್ಕಾರ ರಚಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ರಾಹುಲ್ಗೆ ನೆನಪಿಸಿದ್ದಾರೆ.

ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್'ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಬೇಬಿ ಅವರು, ಭಾರತ ಮತ್ತು ಕೇರಳದಲ್ಲಿ ಸಿಪಿಐ(ಎಂ), ಆರ್ಎಸ್ಎಸ್ನ ಪಾತ್ರದ ಕುರಿತು ಕಾಂಗ್ರೆಸ್ನ ಮಾಜಿ ಅಧ್ಯಕ್ಷರಿಗೆ ತಿಳಿವಳಿಕೆಯ ಕೊರತೆ ಇದೆ ಎಂದಿದ್ದಾರೆ.

ಶುಕ್ರವಾರ ಕೊಟ್ಟಾಯಂನಲ್ಲಿ ಮಾತನಾಡಿದ್ದ ರಾಹುಲ್, ಆರ್ಎಸ್ಎಸ್ ಹಾಗೂ ಸಿಪಿಐ(ಎಂ) ವಿರುದ್ಧ ಸೈದ್ಧಾಂತಿಕ ಹೋರಾಟ ನಡೆಸುತ್ತಿದ್ದೇವೆ. ಜನರ ಬಗ್ಗೆ ಯಾವುದೇ ರೀತಿಯ ಭಾವನಾತ್ಮಕ ನಂಟು ಹೊಂದಿಲ್ಲ ಎಂಬ ಅಪವಾಧವನ್ನು ಅವು ಎದುರಿಸುತ್ತಿವೆ ಎಂದು ಹೇಳಿದ್ದರು.

ಇದಕ್ಕೆ ಪ್ರತಿಯಾಗಿ ಕೇರಳದಲ್ಲಿ ಆರ್ಎಸ್ಎಸ್ ವಿರುದ್ಧ ನಡೆಸುತ್ತಿರುವ ಸೈದಾಂತಿಕ ಹೋರಾಟದಲ್ಲಿ ಸಿಪಿಐ ಮುಂಚೂಣಿಯಲ್ಲಿದೆ ಎಂದಿರುವ ಬೇಬಿ, ರಾಹುಲ್ ಹೇಳಿಕೆಯು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೆಯೇ, 'ಆರ್ಎಸ್ಎಸ್ ವಿರುದ್ಧದ ಹೋರಾಟ ಮುಂದುವರಿಸಲು ನಾವು ಬದ್ಧರಾಗಿದ್ದೇವೆ. ಏಕೆಂದರೆ, ಅವರು ನಮ್ಮ ಪಕ್ಷದ ನೂರಾರು ಯುವ ಕಾರ್ಯಕರ್ತರನ್ನು ಕೊಂದಿದ್ದಾರೆ' ಎಂದು ಆರೋಪಿಸಿದ್ದಾರೆ.

'ಕೇರಳದಲ್ಲಿ ಆರ್ಎಸ್ಎಸ್ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ನ ದಾಖಲೆ ಏನು ಎಂಬುದು ರಾಹುಲ್ ಗಾಂಧಿಗೆ ತಿಳಿದಿದೆಯೋ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ. ಸಿಪಿಐ(ಎಂ) ಮತ್ತು ಆರ್ಎಸ್ಎಸ್ ಅನ್ನು ಸಮೀಕರಿಸಿರುವುದು ಅವರಿಗೆ ಕೇರಳದ ಮತ್ತು ಭಾರತದಲ್ಲಿ ಇವೆರಡರ ಪಾತ್ರದ ಕುರಿತು ಸರಿಯಾದ ತಿಳಿವಳಿಕೆ ಇಲ್ಲ ಎಂಬುದನ್ನು ತೋರುತ್ತದೆ' ಎಂದು ಟೀಕಿಸಿದ್ದಾರೆ.

'ನಾವು ಆರ್ಎಸ್ಎಸ್, ಬಿಜೆಪಿ ವಿರುದ್ಧ ಎಷ್ಟು ವ್ಯವಸ್ಥಿತವಾಗಿ ಹೋರಾಡುತ್ತಿದ್ದೇವೆ ಎಂಬುದನ್ನು ವಿವರಿಸಬೇಕಿಲ್ಲ' ಎಂದು ಸಿಪಿಐ(ಎಂ) ನಾಯಕ ಸ್ಪಷ್ಟಪಡಿಸಿದ್ದಾರೆ.

'ಸಿಪಿಐ(ಎಂ) ಮತ್ತು ಇತರ ಎಡ ಪಕ್ಷಗಳ ಬೆಂಬಲ ದೊರೆಯದೇ ಇದ್ದಿದ್ದರೆ 2004ರಲ್ಲಿ ಮನಮೋಹನ್ ಸಿಂಗ್ ಅವರು ಸರ್ಕಾರ ರಚಿಸಲು ಸಾಧ್ಯವಾಗುತ್ತಿರಲಿಲ್ಲ ಎಂಬುದನ್ನು ರಾಹುಲ್ ಗಾಂಧಿ ನೆನಪಿಸಿಕೊಳ್ಳಬೇಕಾಗಿದೆ. ಕಾಂಗ್ರೆಸ್ ಪಕ್ಷವು 2004ರ ಚುನಾವಣೆ ಬಳಿಕ ಲೋಕಸಭೆಯಲ್ಲಿ ಬಹುಮತ ಗಳಿಸಲಿಲ್ಲ' ಎಂದು ಒತ್ತಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.