ರಾಯ್ಪುರ: ಛತ್ತೀಸಗಢದ ಮೊಹ್ಲಾ ಮನ್ಪುರ ಅಂಬಾಘರ್ ಚೌಕಿ ಎನ್ನುವ ಜಿಲ್ಲೆಯ ನಕ್ಸಲ್ ಪೀಡಿತ 17 ಗ್ರಾಮಗಳಿಗೆ ಇದೇ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ದೊರೆತಿದೆ.

ಮುಖ್ಯಮಂತ್ರಿ ಮಜರತೋಲಾ ವಿದ್ಯುತೀಕರಣ ಯೋಜನೆಯಡಿ ₹3 ಕೋಟಿ ವೆಚ್ಚದಲ್ಲಿ 540 ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಟ್ಟವಾದ ಕಾಡು ಪ್ರದೇಶ, ನಕ್ಸಲರ ಬೆದರಿಕೆ ನಡುವೆ ಈ ಹಳ್ಳಿಗಳನ್ನು ತಲುಪುವುದು ಕಷ್ಟ. ಹೀಗಿದ್ದರೂ ಗ್ರಿಡ್ ಮೂಲಕ ವಿದ್ಯುತ್ ಸಂಪರ್ಕ್ ಕಲ್ಪಿಸುವುದು ಒಂದು ಧ್ಯೇಯವಾಗಿದೆ. ಈ ಹಳ್ಳಿಗಳು ಸೋಲಾರ್ ಸೌಲಭ್ಯವವನ್ನು ಹೊಂದಿವೆ, ಅದರೆ ನಿರ್ವಹಣೆಯ ಸಮಸ್ಯೆ ಎದುರಾಗಿತ್ತು. ಕೆಲವು ಸೋಲಾರ್ ಫಲಕಗಳು ಕಳುವಾಗಿದ್ದವು. ಇದರಿಂದಾಗಿ ವಿದ್ಯಾರ್ಥಿಗಳು ಅಧ್ಯಯನಕ್ಕೆ ಸೀಮೆಎಣ್ಣೆಯ ದೀಪವನ್ನು ನೆಚ್ಚಿಕೊಳ್ಳಬೇಕಾದ ಸ್ಥಿತಿಯಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿದ್ಯುತ್ ಸಂಪರ್ಕ ದೊರೆತ ಹಿನ್ನೆಲೆ ದಶಕಗಳ ಕನಸು ಈಡೇರಿದ ಖುಷಿಯಲ್ಲಿ ಗ್ರಾಮಸ್ಥರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.