ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇಗುಲದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಟಸ್ಥ ಸಂಸ್ಥೆಯಿಂದ ತನಿಖೆಗೆ ಒತ್ತಾಯಿಸಿದ್ದಾರೆ.

ಕೇರಳಕ್ಕೆ ಭೇಟಿ ನೀಡಿರುವ ಅಮಿತ್ ಶಾ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾಯಿತರಾದ ಬಿಜೆಪಿ ಪ್ರತಿನಿಧಿಗಳನ್ನು ಉದ್ದೇಶಿಸಿ ಅಮಿತ್ ಶಾ ಮಾತನಾಡಿದರು. ಈ ವೇಳೆ ಮುಂಬರುವ ಕೇರಳ ವಿಧಾನಸಭೆ ಚುನಾವಣೆಗೆ 'ಮಿಷನ್ 2026' ಕಾರ್ಯಕ್ರಮವನ್ನು ಉದ್ಘಾಟಿಸಿದರು.
.ಚಿನ್ನ ನಾಪತ್ತೆ ಪ್ರಕರಣ: ಶಬರಿಮಲೆ ಮುಖ್ಯ ಅರ್ಚಕರ ಬಂಧಿಸಿದ ಎಸ್ಐಟಿ.ಶಬರಿಮಲೆ ಏರ್ಪೋರ್ಟ್: ಭೂಸ್ವಾಧೀನ ಪ್ರಕ್ರಿಯೆಗೆ ಕೇರಳ ಹೈಕೋರ್ಟ್ ತಡೆ.
'ಶಬರಿಮಲೆಯ ಸಂಪತ್ತನ್ನು ರಕ್ಷಿಸಲು ವಿಫಲರಾದವರಿಂದ ಜನರ ನಂಬಿಕೆಯನ್ನು ಉಳಿಸಲು ಸಾಧ್ಯವಿಲ್ಲ. ಕೇರಳದಲ್ಲಿ ಭಕ್ತರ ನಂಬಿಕೆಯನ್ನು ಬಿಜೆಪಿಯಿಂದ ಮಾತ್ರ ರಕ್ಷಿಸಲು ಸಾಧ್ಯ' ಎಂದು ಹೇಳಿದ್ದಾರೆ.

'ಶಬರಿಮಲೆ ಪ್ರಕರಣದಲ್ಲಿ ಎಫ್ಐಆರ್ ಗಮನಿಸಿದ್ದೇನೆ. ಆರೋಪಿಗಳ ರಕ್ಷಣೆಗಾಗಿಯೇ ಅದನ್ನು ರೂಪಿಸಲಾಗಿದೆ. ಎಲ್ಡಿಎಫ್ನ ಇಬ್ಬರು ವ್ಯಕ್ತಿಗಳು ಇರುವಾಗ ನಿಷ್ಪಕ್ಷಪಾತ ತನಿಖೆ ನಿರೀಕ್ಷಿಸಲು ಹೇಗೆ ಸಾಧ್ಯ? ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರು ಭಾಗಿಯಾಗಿರುವ ಬಗ್ಗೆಯೂ ಸಾಕ್ಷ್ಯಗಳಿವೆ. ಅದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ' ಎಂದಿದ್ದಾರೆ.

'ಶಬರಿಮಲೆ ಪ್ರಕರಣ ತನಿಖೆಯನ್ನು ತಟಸ್ಥ ಸಂಸ್ಥೆಗೆ ಹಸ್ತಾಂತರಿಸಬೇಕು ಎಂದು ನಾನು ಸಿಎಂ ಪಿಣರಾಯಿ ಅವರನ್ನು ಒತ್ತಾಯಿಸುತ್ತೇನೆ. ಬಿಜೆಪಿಯಿಂದ ಪ್ರತಿಭಟನೆ ಮುಂದುವರಿಯಲಿದ್ದು, ಮನೆ ಮನೆಗೆ ಜಾಗೃತಿ ಅಭಿಯಾನ ಕೈಗೊಳ್ಳಲಿದ್ದೇವೆ' ಎಂದಿದ್ದಾರೆ.

'ಜಗತ್ತಿನಾದ್ಯಂತ ಕಮ್ಯುನಿಸಂ ಅಂತ್ಯ ಕಂಡಿದ್ದು, ಭಾರತದಲ್ಲಿ ಕಾಂಗ್ರೆಸ್ನ ಅವನತಿಯಾಗಿದೆ. ಕೇರಳದಲ್ಲಿ ಅಭಿವೃದ್ಧಿ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ. ನಮ್ಮ ಹಾದಿ ಸುಲಭವಲ್ಲ. ಸವಾಲಿನಿಂದ ಕೂಡಿದೆ. ಕೇರಳದಲ್ಲಿ ಬಿಜೆಪಿ ಸರ್ಕಾರ ರಚಿಸುವುದು ನಮ್ಮ ಗುರಿಯಾಗಿದೆ' ಎಂದು ಹೇಳಿದ್ದಾರೆ.