ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ: ‘ಟೈಗರ್‌ 3’ ಸಿನಿಮಾ ಪ್ರದರ್ಶನದ ವೇಳೆ ಸಿನಿಮಾ ಹಾಲ್‌ನಲ್ಲಿ ಪಟಾಕಿ ಸಿಡಿತ

Published 13 ನವೆಂಬರ್ 2023, 12:58 IST
Last Updated 13 ನವೆಂಬರ್ 2023, 12:58 IST
ಅಕ್ಷರ ಗಾತ್ರ

ಮುಂಬೈ: ನಾಸಿಕ್‌ ಜಿಲ್ಲೆಯ ಮಾಲೆಗಾವ್‌ನಲ್ಲಿರುವ ಮೋಹನ್‌ ಸಿನಿಮಾ ಹಾಲ್‌ನಲ್ಲಿ ‘ಟೈಗರ್‌ 3’ ಸಿನಿಮಾ ಪ್ರದರ್ಶನದ ವೇಳೆ ಅಪಾರ ಪ್ರಮಾಣದ ಪಟಾಕಿ ಸಿಡಿಸಿರುವ ಆಘಾತಕಾರಿ ಘಟನೆ ಭಾನುವಾರ ನಡೆದಿದೆ.

ಕೃತ್ಯವು ಸಿನಿಮಾ ಹಾಲ್‌ನ ಸುರಕ್ಷತೆ ಮತ್ತು ಭದ್ರತಾ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದ್ದು, ಇಷ್ಟು ಪ್ರಮಾಣದ ಪಟಾಕಿಗಳನ್ನು ಒಳಗೆ ತಂದಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವವಾಗಿದೆ.

ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ತೀವ್ರ ಟೀಕೆ ವ್ಯಕ್ತವಾಗಿದೆ. ‘ರಾಕೆಟ್‌’, ‘ಬಾಂಬ್’ ಪಟಾಕಿಗಳು ಸಿಡಿಯುತ್ತಿದ್ದಂತೆಯೇ ಜನರು ಕಂಗಾಲಾಗಿ ಓಡುತ್ತಿರುವ ದೃಶ್ಯ ವಿಡಿಯೊದಲ್ಲಿದೆ.

ಛಾವನಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT