ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಜ್ರಿವಾಲ್‌ ಜಾಮೀನಿಗೆ ಹೈಕೋರ್ಟ್‌ ಮಧ್ಯಂತರ ತಡೆ: ಜೂನ್‌ 26ಕ್ಕೆ SC ವಿಚಾರಣೆ

Published 24 ಜೂನ್ 2024, 7:40 IST
Last Updated 24 ಜೂನ್ 2024, 7:40 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ನೀಡಿದ್ದ ಜಾಮೀನು ಆದೇಶಕ್ಕೆ ದೆಹಲಿ ಹೈಕೋರ್ಟ್‌ ವಿಧಿಸಿದ್ದ ಮಧ್ಯಂತರ ತಡೆಯ ವಿರುದ್ಧ ಅವರು ಸಲ್ಲಿಸಿದ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಜೂನ್‌ 26ಕ್ಕೆ ನಿಗದಿಪಡಿಸಿದೆ.

ಮನೋಜ್‌ ಮಿಶ್ರಾ ಮತ್ತು ಎಸ್.ವಿ.ಎನ್.ಭಟ್ಟಿ ಅವರಿದ್ದ ರಜಾಕಾಲದ ಪೀಠವು, ಈ ವಿಷಯದ ಕುರಿತು ಹೈಕೋರ್ಟ್ ಆದೇಶ ಹೊರಡಿಸುವವರೆಗೆ ಕಾಯಬೇಕು ಎಂದಿದೆ. 

ಕೇಜ್ರಿವಾಲ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ಜಾಮೀನು ಆದೇಶದ ಮೇಲಿನ ಮಧ್ಯಂತರ ತಡೆಯನ್ನು ತೆರವು ಮಾಡುವಂತೆ ಕೋರಿದರು.

ಇ.ಡಿ ಪರವಾಗಿ ವಾದ ಮಂಡಿಸಿದ ಎಎಸ್‌ಜಿ ಎಸ್‌.ವಿ ರಾಜು ಅವರು ಕೇಜ್ರಿವಾಲ್‌ ಅವರ ಮನವಿಯನ್ನು ವಿರೋಧಿಸಿದರು. ಜತೆಗೆ ಹೈಕೋರ್ಟ್ ತನ್ನ ತಡೆಯಾಜ್ಞೆ ಅರ್ಜಿಯ ತೀರ್ಪು ಪ್ರಕಟಿಸಲಿದೆ ಎಂದು ಹೇಳಿದರು.

ಮಾರ್ಚ್ 21 ರಂದು ಕೇಜ್ರಿವಾಲ್‌ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು. ಹೈಕೋರ್ಟ್ ಮಧ್ಯಂತರ ತಡೆ ನೀಡದಿದ್ದರೆ ಕಳೆದ ಶುಕ್ರವಾರ ಕೇಜ್ರಿವಾಲ್‌, ತಿಹಾರ್ ಜೈಲಿನಿಂದ ಬಿಡುಗಡೆಯಾಗುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT