ಜಮ್ಮು: ಭಾರತ–ಪಾಕಿಸ್ತಾನ ನಡುವಿನ ಉದ್ವಿಗ್ನತೆ ಬಳಿಕ ಜಮ್ಮುವಿನ ಗಡಿ ಜಿಲ್ಲೆಗಳಲ್ಲಿ ಮುಚ್ಚಲಾಗಿದ್ದ ಶಾಲಾ–ಕಾಲೇಜುಗಳನ್ನು ಗುರುವಾರ ಆರಂಭಿಸಲಾಗಿದೆ.

ಕಳೆದ ಎಂಟು ದಿನಗಳಿಂದ ಜಮ್ಮು, ಸಾಂಬಾ, ಕಥುವಾ, ರಜೌರಿ ಮತ್ತು ಪೂಂಚ್ ಜಿಲ್ಲೆಗಳಲ್ಲಿ ಶಾಲಾ–ಕಾಲೇಜುಗಳನ್ನು ಮುಚ್ಚಲಾಗಿತ್ತು.

ಈ ಐದು ಜಿಲ್ಲೆಗಳು ನಿಯಂತ್ರಣ ರೇಖೆ ಮತ್ತು ಅಂತರರಾಷ್ಟ್ರೀಯ ಗಡಿ ರೇಖೆ ಸಮೀಪದಲ್ಲಿವೆ. ಕಳೆದ ಮೂರು ದಿನಗಳಿಂದ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳಿರುವ ಹಿನ್ನೆಲೆಯಲ್ಲಿ ಗುರುವಾರ ಶಾಲೆಗಳು ಪುನರಾರಂಭಗೊಂಡವು.

ಆದಾಗ್ಯೂ ಗಡಿಗೆ ಹೊಂದಿಕೊಂಡಿರುವ 30 ಶಾಲೆಗಳನ್ನು ಮುಚ್ಚಲಾಗಿದೆ. ಪರಿಸ್ಥಿತಿ ನೋಡಿಕೊಂಡು ಶಾಲೆಗಳನ್ನು ತೆರೆಯಲಾಗುವುದು ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಶಾಂತಿ ಮರಳಿದೆ, ವಿದ್ಯಾರ್ಥಿಗಳು ಸಹ ಶಾಲೆಗೆ ಮರಳಿದ್ದಾರೆ. ಉದ್ವಿಗ್ನತೆ ಸಮಯದಲ್ಲಿ ನಾವು ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇವೆ. ಈಗ ನಿರಾಳರಾಗಿದ್ದೇವೆ ಎಂದು ಗೋಯೆಂಕಾ ಶಾಲೆಯ ಶಿಕ್ಷಕಿ ಜಾಗೃತಿ ರೈನಾ ಹೇಳಿದರು.

ಎಂಟು ದಿನಗಳ ನಂತರ ಶಾಲೆಗೆ ಮರಳಲು ನಮಗೆ ತುಂಬಾ ಸಂತೋಷವಾಗಿದೆ. ಯುದ್ಧದಂತಹ ಪರಿಸ್ಥಿತಿ ನಮ್ಮನ್ನು ಹೆಚ್ಚು ಕಾಲ ಶಾಲೆಯಿಂದ ದೂರವಿಡಬಹುದು ಎಂದು ನಾವು ಭಯಪಟ್ಟಿದ್ದೆವು. ನಮ್ಮ ಸ್ನೇಹಿತರನ್ನು ಮತ್ತೆ ಭೇಟಿಯಾಗುತ್ತಿರುವುದು ಸಂತೋಷದ ಕ್ಷಣ ಎಂದು ಕೆ.ಸಿ. ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿ ಉರ್ವಶಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.