ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಮನಿರ್ದೇಶನ: ನಿಯಮ ರದ್ದುಪಡಿಸಿದ ಸೆಬಿ

Published 10 ಜೂನ್ 2024, 16:29 IST
Last Updated 10 ಜೂನ್ 2024, 16:29 IST
ಅಕ್ಷರ ಗಾತ್ರ

ನವದೆಹಲಿ: ನಾಮನಿರ್ದೇಶನದ ಆಯ್ಕೆಯನ್ನು ಸಲ್ಲಿಸದೆ ಇದ್ದವರ ಡಿಮ್ಯಾಟ್ ಖಾತೆಗಳನ್ನು ಹಾಗೂ ಮ್ಯೂಚುವಲ್‌ ಫಂಡ್‌ ಫೋಲಿಯೊಗಳನ್ನು ಸ್ಥಗಿತಗೊಳಿಸುವ ನಿಯಮವನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ರದ್ದುಪಡಿಸಿದೆ. ಈ ಮೂಲಕ ಅದು ಹೂಡಿಕೆದಾರರಿಗೆ ಒಂದಿಷ್ಟು ಅನುಕೂಲ ಕಲ್ಪಿಸಿದೆ.

ಷೇರುಗಳು, ಬಾಂಡ್‌ಗಳನ್ನು ಭೌತಿಕ ಸ್ವರೂಪದಲ್ಲಿ ಹೊಂದಿರುವವರು ನಾಮನಿರ್ದೇಶನದ ಆಯ್ಕೆಯನ್ನು ಸಲ್ಲಿಸದೆ ಇದ್ದರೂ ಡಿವಿಡೆಂಡ್, ಬಡ್ಡಿಯಂತಹ ಯಾವುದೇ ಪಾವತಿಗಳನ್ನು ಸ್ವೀಕರಿಸಲು ಅರ್ಹರು ಎಂದು ಹೇಳಿದೆ.

ಮ್ಯೂಚುವಲ್‌ ಫಂಡ್‌ ಹೂಡಿಕೆದಾರರು ತಮ್ಮ ಹೂಡಿಕೆಗಳಿಗೆ ನಾಮನಿರ್ದೇಶನ ಮಾಡಲು ಅಥವಾ ಯಾರನ್ನೂ ನಾಮನಿರ್ದೇಶನ ಮಾಡುತ್ತಿಲ್ಲ ಎಂದು ತಿಳಿಸಲು ಜೂನ್‌ 30 ಕಡೆಯ ದಿನ ಎಂದು ಸೆಬಿ ಈ ಮೊದಲು ಹೇಳಿತ್ತು. ಇದರಲ್ಲಿ ವಿಫಲರಾದಲ್ಲಿ ಖಾತೆಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT