ಅಲಿಘಡ: ಉತ್ತರ ಪ್ರದೇಶ ಅಲಿಘಡದ ಸರಾಯ್ ಮಿಯಾನ್ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದವರು ವಾಸಿಸುವ ದೆಹಲಿ ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆಯಾಗಿದೆ ಎಂದು ಹಿಂದೂ ಬಲಪಂಥೀಯ ಸಂಘಟನೆಯ ನಾಯಕರು ಘೋಷಿಸಿದ್ದಾರೆ.

ಸಾರಾಯಿ ರೆಹಮಾನ್ ಪ್ರದೇಶದಲ್ಲಿ ಹಿಂದೂ ದೇವಾಲಯ ಪತ್ತೆಯಾದ 36 ಗಂಟೆಗಳ ಬಳಿಕ ಗುರುವಾರ ಸಂಜೆ ಮತ್ತೊಂದು ಶಿವ ದೇವಾಲಯ ಪತ್ತೆಯಾಗಿದೆ.

ಭಾರತೀಯ ಜನತಾ ಯುವ ಮೋರ್ಚಾ ಕಾರ್ಯದರ್ಶಿ, ಬಜರಂಗ ದಳದ ನಾಯಕ ಸೇರಿ ಹಲವರು ಪೊಲೀಸರ ಹಾಜರಿಯಲ್ಲೇ ಗೇಟ್ ಒಡೆದು ದೇವಾಲಯದ ಒಳ ಪ್ರವೇಶಿಸಿದ್ದಾರೆ. ಶಿವಲಿಂಗದ ಅವಶೇಷಗಳ ಮೇಲೆ ಹರಡಿರುವ ವಿಗ್ರಹಗಳು ಸಂಪೂರ್ಣ ಅವ್ಯವಸ್ಥೆಯ ಸ್ಥಿತಿಯಲ್ಲಿ ಕಂಡುಬಂದಿದೆ. ಬಳಿಕ ಸ್ಥಳವನ್ನು ಶುದ್ಧಗೊಳಿಸಿ, ಧಾರ್ಮಿಕ ಘೋಷಣೆಗಳನ್ನು ಕೂಗಲಾಗಿದೆ ಎಂದು ಸಂಘಟನೆ ಹೇಳಿರುವುದಾಗಿ ವರದಿಯಾಗಿದೆ.

ಈವರೆಗೆ ಎರಡು ಹಿಂದೂ ದೇವಾಲಯ ಪತ್ತೆಯಾದಲ್ಲಿ ಯಾವುದೇ ಆಹಿತಕರ ಘಟನೆ ನಡೆದಿಲ್ಲ, ದೇವಾಲಯವನ್ನು ಸ್ವಚ್ಚಗೊಳಿಸುವಾಗ ಅಲ್ಲಿದ್ದ ಮುಸ್ಲಿಂ ಸಮುದಾಯದ ಜನ ಶಾಂತವಾಗಿದ್ದರು ಎಂದು ನಗರದ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.