ಲಖನೌ: ವಿಶೇಷ ಉಪಕ್ರಮದ ಭಾಗವಾಗಿ ಉತ್ತರ ಪ್ರದೇಶದ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಎಲ್ಲಾ ಜಿಲ್ಲೆಗಳು, ಬ್ಲಾಕ್ಗಳು ಮತ್ತು ಹಳ್ಳಿಗಳಲ್ಲಿ ಯುವತಿಯರು, ಮಹಿಳೆಯರಿಗಾಗಿ ಆತ್ಮರಕ್ಷಣೆ ಕಾರ್ಯಾಗಾರಗಳನ್ನು ಆಯೋಜಿಸಲು ಆರಂಭಿಸಿದೆ. ಇದರಡಿ ಕಾನೂನು ಹಕ್ಕುಗಳು ಮತ್ತು ಸರ್ಕಾರಿ ಬೆಂಬಲ ವ್ಯವಸ್ಥೆಗಳ ಬಗ್ಗೆ ಪ್ರಾಯೋಗಿಕ ಸುರಕ್ಷತಾ ತರಬೇತಿ ಮತ್ತು ಜಾಗೃತಿಯನ್ನೂ ಮೂಡಿಸಲಾಗುತ್ತದೆ.

ಅಧಿಕೃತ ಪತ್ರಿಕಾ ಹೇಳಿಕೆಯ ಪ್ರಕಾರ, ಮಿಷನ್ ಶಕ್ತಿ 5.0 ಉಪಕ್ರಮದ ಅಡಿಯಲ್ಲಿ ಕಾರ್ಯಾಗಾರಗಳನ್ನು ಅಂತರರಾಷ್ಟ್ರೀಯ ಹೆಣ್ಣು ಮಕ್ಕಳ ವಾರದಲ್ಲಿ(ಅಕ್ಟೋಬರ್ 3-11) ನಡೆಸಲಾಗುತ್ತಿದೆ. ಸ್ವರಕ್ಷಣೆ ತಂತ್ರಗಳು, ತುರ್ತು ಪ್ರತಿಕ್ರಿಯೆ, ಸಹಾಯವಾಣಿ ಬಳಕೆ ಮತ್ತು ಸೈಬರ್ ಭದ್ರತಾ ಜಾಗೃತಿಯನ್ನು ಈ ಕಾರ್ಯಾಗಾರ ಒಳಗೊಂಡಿದೆ.

ಮಹಿಳೆಯರು ಪ್ರತಿಕೂಲ ಸಂದರ್ಭಗಳಲ್ಲಿ ಮೌನವಾಗಿರಬಾರದು.ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮತ್ತು ಲಭ್ಯವಿರುವ ಸರ್ಕಾರಿ ಹಾಗೂ ಸಾಮಾಜಿಕ ಸಹಾಯವನ್ನು ಬಳಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳು ಒತ್ತಿ ಹೇಳಿದ್ದಾರೆ.

ಮಹಿಳೆಯರ ಸ್ವಾವಲಂಬನೆಯನ್ನು ಹೆಚ್ಚಿಸಲು ಸರ್ಕಾರಿ ಯೋಜನೆಗಳು ಮತ್ತು ಸಾಮಾಜಿಕ ಬೆಂಬಲವನ್ನು ಹೇಗೆ ಪಡೆಯುವುದು ಎಂಬುದರ ಕುರಿತೂ ಈ ಅಭಿಯಾನವು ಭಾಗವಹಿಸುವವರಿಗೆ ಶಿಕ್ಷಣ ನೀಡುತ್ತದೆ.

ಈ ಉಪಕ್ರಮವು ಯುವತಿಯರಿಗೆ ಶಿಕ್ಷಣದಷ್ಟೇ ಮುಖ್ಯವಾಗಿದೆ. ಇದು ಸ್ವಯಂ ರಕ್ಷಣಾ ಕೌಶಲ್ಯ ಮತ್ತು ಅರಿವಿನೊಂದಿಗೆ ಮಹಿಳೆಯರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ಲೀನಾ ಜೋಹ್ರಿ, ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.