ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಪೂರ್ಣವಾಗಿದೆ ಎಂದು ರಾಮಮಂದಿರಕ್ಕೆ ಭೇಟಿ ನೀಡಲು ನಿರಾಕರಿಸಿದ ಅವಿಮುಕ್ತೇಶ್ವರಾನಂದ

Published : 22 ಸೆಪ್ಟೆಂಬರ್ 2024, 16:04 IST
Last Updated : 22 ಸೆಪ್ಟೆಂಬರ್ 2024, 16:04 IST
ಫಾಲೋ ಮಾಡಿ
Comments

ಲಖನೌ: ಉತ್ತರಾಖಂಡದ ಜ್ಯೋತಿರ್ಮಠದ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಭಾನುವಾರ ಅಯೋಧ್ಯೆಗೆ ಭೇಟಿ ನೀಡಿದ್ದರೂ, ರಾಮ ಮಂದಿರವು ಅಪೂರ್ಣವಾಗಿದೆ ಎಂಬ ಕಾರಣಕ್ಕೆ ಅಲ್ಲಿಗೆ ಭೇಟಿ ನೀಡಲು ನಿರಾಕರಿಸಿದರು.

ಯಾವುದೇ ದೇವಸ್ಥಾನದ ಪಾಲಿಗೆ ‘ಧ್ವಜ’ವು (ದೇವಸ್ಥಾನದ ಅತ್ಯಂತ ಎತ್ತರದ ಭಾಗ) ಅತ್ಯಂತ ಮುಖ್ಯವಾಗುತ್ತದೆ. ‘ಧ್ವಜ’ವಿಲ್ಲದೆ ದೇವಸ್ಥಾನವು ಪೂರ್ಣವಾಗಿದೆ ಎಂದು ಭಾವಿಸಲಾಗದು ಎಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ಹೇಳಿದರು.

‘ಧ್ವಜದ ದರ್ಶನ ಕಡ್ಡಾಯ. ಧ್ವಜದ ದರ್ಶನ ಆಗುವುದಿಲ್ಲ ಎಂದಾದರೆ ನಾನು ಅಲ್ಲಿ (ರಾಮ ಮಂದಿರದಲ್ಲಿ) ಏನು ಮಾಡಲಿ’ ಎಂದು ಅವರು ಪ್ರಶ್ನಿಸಿದರು. ರಾಮ ಮಂದಿರವು ಪೂರ್ಣಗೊಂಡ ನಂತರ ತಾವು ಅಲ್ಲಿ ಪೂಜೆ ಸಲ್ಲಿಸುವುದಾಗಿ ತಿಳಿಸಿದರು.

ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ರಾಮ ಮಂದಿರದ ಸನಿಹದಲ್ಲೇ ಇರುವ ಖೇರೇಶ್ವರ ಮಹಾದೇವ ದೇವಸ್ಥಾನದಲ್ಲಿ ಅಭಿಷೇಕ ಪೂಜೆ ಮಾಡಿದರು. ಅಪೂರ್ಣ ಮಂದಿರದಲ್ಲಿ ಬಾಲರಾಮನ ವಿಗ್ರಹಕ್ಕೆ ಪ್ರಾಣ‍ಪ್ರತಿಷ್ಠಾಪನೆ ಮಾಡುವುದು ಹಿಂದೂ ಧರ್ಮಕ್ಕೆ ವಿರುದ್ಧ ಎಂಬ ಕಾರಣ ನೀಡಿದ್ದ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು, ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ.

ಅವರ ಈ ನಿಲುವನ್ನು ಹಲವಾರು ಮಠಾಧೀಶರು, ಅದರಲ್ಲೂ ಮುಖ್ಯವಾಗಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಜೊತೆ ಗುರುತಿಸಿಕೊಂಡವರು, ಟೀಕಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT