ಮುಂಬೈ: ಎನ್ಸಿಪಿ ನಾಯಕಿ ಸುನೇತ್ರಾ ಪವಾರ್ ಅವರು ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಬಗ್ಗೆ ಶರದ್ ಪವಾರ್ ಅವರಿಗಾಗಲಿ ಅಥವಾ ಇನ್ನಿತರ ನಾಯಕರಿಗಾಗಲಿ ಯಾವುದೇ ಮುಂಚಿತ ಮಾಹಿತಿ ಇರಲಿಲ್ಲ ಎಂದು ಎನ್ಸಿಪಿ (ಎಸ್ಪಿ) ಬಣದ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಶಶಿಕಾಂತ್ ಶಿಂದೆ ಹೇಳಿದ್ದಾರೆ.

ಸುನೇತ್ರಾ ಪವಾರ್ ಅವರ ಪ್ರಮಾಣವಚನ ಸಮಾರಂಭವನ್ನು ತರಾತುರಿಯಲ್ಲಿ ನಡೆಸಿದ್ದಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿಂದೆ, ‘ಅಜಿತ್ ಪವಾರ್ ಅವರ ಅಗಲಿಕೆಯು ರಾಜ್ಯಕ್ಕೆ ತುಂಬಲಾರದ ನಷ್ಟ. ಈ ದುಃಖದ ಸಮಯದಲ್ಲಿ ಇಂಥ ನಿರ್ಧಾರವನ್ನು ಏಕೆ ತೆಗೆದುಕೊಂಡಿದ್ದಾರೆ ಎಂಬುದು ನಮಗೆ ತಿಳಿಯದು. ಈ ಬಗ್ಗೆ ಅವರೇ ಸ್ಪಷ್ಟನೆ ನೀಡಬೇಕು. ಈ ಬಗ್ಗೆ ನಮಗೂ ಮುಂಚಿತ ಮಾಹಿತಿ ಇರಲಿಲ್ಲ’ ಎಂದಿದ್ದಾರೆ.

ಅಲ್ಲದೇ, ‘ಜನವರಿ 17ರಂದು ಅಜಿತ್ ಪವಾರ್ ಅವರು ಶರದ್ ಪವಾರ್ ಅವರೊಂದಿಗೆ ಸಭೆ ನಡೆಸುವುದಕ್ಕೂ ಮುನ್ನವೇ 8–10 ಸಭೆಗಳನ್ನು ನಡೆಸಿದ್ದರು. ಸ್ಥಳೀಯ ಸಂಸ್ಥೆಗಳ ಚುನಾವಣೆ ಬಳಿಕ ಎನ್ಸಿಪಿಯ ಎರಡೂ ಬಣಗಳನ್ನು ಒಗ್ಗೂಡಿಸುವ ಕೆಲಸಗಳನ್ನು ಮಾಡಲು ನಿರ್ಧರಿಸಲಾಗಿತ್ತು. ಈ ನಿಲುವನ್ನು ಶರದ್ ಪವಾರ್ ಅವರಿಗೂ ತಿಳಿಸಲಾಗಿತ್ತು. ಆದರೆ, ಈಗ ಅಜಿತ್ ಅವರು ಇಲ್ಲ. ಹೀಗಾಗಿ ಮುಂದೆ ಏನು ಮಾಡಬೇಕು ಎಂಬುದನ್ನು ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಇತರರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಅವರಿಗೆ ಬಿಟ್ಟ ವಿಚಾರ ’ ಎಂದೂ ಶಿಂಧೆ ಹೇಳಿದ್ದಾರೆ.

ಅಜಿತ್ ಎಲ್ಲವನ್ನೂ ಹೇಳುತ್ತಿದ್ದರು: ಫಡಣವೀಸ್

ಎನ್ಸಿಪಿ ಬಣಗಳನ್ನು ವಿಲೀನಗೊಳಿಸಲು ಅಜಿತ್ ಪವಾರ್ ಬಯಸಿದ್ದರೆ ಅದನ್ನು ನಮ್ಮ ಗಮನಕ್ಕೆ ತರದಂತೆ ಮಾಡುತ್ತಿದ್ದರೆ? ಅವರು ನನಗೆ ಎಲ್ಲವನ್ನೂ ತಿಳಿಸಿರುತ್ತಿದ್ದರು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದ್ದಾರೆ.

ಎನ್ಸಿಪಿಯ ಎರಡೂ ಬಣಗಳ ವಿಲೀನ ಘೋಷಿಸಲು ಫೆಬ್ರುವರಿ 12ರ ದಿನಾಂಕವನ್ನು ಅಜಿತ್ ಪವಾರ್ ನಿಗದಿಪಡಿಸಿದ್ದರು ಎಂದು ಎನ್ಸಿಪಿ (ಎಸ್ಪಿ) ಬಣದ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದರ ಬಗ್ಗೆ ಫಡಣವೀಸ್ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ‘ಫೆಬ್ರುವರಿ 12ರ ದಿನಾಂಕದ ಬಗ್ಗೆ ನನಗಂತೂ ಯಾವುದೇ ಮಾಹಿತಿ ಇರಲಿಲ್ಲ’ ಎಂದೂ ಹೇಳಿದ್ದಾರೆ.

ಸುನೇತ್ರಾ ಅವರ ಆತುರದ ಪದಗ್ರಹಣಕ್ಕೆ ಸಂಬಂಧಿಸಿದ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಫಡಣವೀಸ್, ‘ಈ ಬಗ್ಗೆ ಎನ್ಸಿಪಿ ಅವರು ಉತ್ತರ ನೀಡಲಿದ್ದಾರೆ’ ಎಂದಿದ್ದಾರೆ. ‘ಕೆಲವು ನಿರ್ಧಾರಗಳನ್ನು ಸಂದರ್ಭಕ್ಕೆ ತಕ್ಕಂತೆ ತೆಗೆದುಕೊಳ್ಳಬೇಕಾಗುತ್ತದೆ. ಈ ಹಿಂದೆ ಇಂದಿರಾ ಗಾಂಧಿ ಅವರ ಅಂತ್ಯಕ್ರಿಯೆ ಮುಗಿಯುವ ಮುನ್ನವೇ ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು’ ಎಂದೂ ಅವರು ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.