ಮುಂಬೈ: ಆರ್ಎಸ್ಎಸ್ ಮತ್ತು ಅವಿಭಜಿತ ಶಿವಸೇನೆಯು ಹಿಂದುತ್ವವನ್ನೇ ಉಸಿರಾಡುತ್ತಿದ್ದರೂ, ಸದಾ ಭಿನ್ನ ಆಲೋಚನಗಳನ್ನು ಹೊಂದಿವೆ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ಗುರುವಾರ ಹೇಳಿದ್ದಾರೆ.

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕಾನಾಥ ಶಿಂದೆ ಅವರು ‘ಆರ್ಎಸ್ಎಸ್ ಮತ್ತು ಶಿವಸೇನೆಯ ಆಲೋಚನೆಗಳು ಒಂದೇ ಆಗಿದೆ’ ಎಂದು ಹೇಳಿದ್ದರ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್ , ‘1975 ರಲ್ಲಿ ಶಿವಸೇನೆಯನ್ನು ಕಾಂಗ್ರೆಸ್ನೊಂದಿಗೆ ವಿಲೀನ ಮಾಡುವಂತೆ ಪಕ್ಷದ ಸ್ಥಾಪಕ ಬಾಳಾ ಠಾಕ್ರೆ ಅವರ ಮೇಲೆ ಒತ್ತಡ ಹೇರಲಾಗಿತ್ತು. ಆದರೆ ಪಕ್ಷದ ಸ್ವಾತಂತ್ರ್ಯಕ್ಕೆ ಅದು ಅಡ್ಡಿಯಾಗುವುದೆಂದು ವಿಲೀನಕ್ಕೆ ಅವಕಾಶ ನೀಡಲಿಲ್ಲ’ ಎಂದರು.

‘ಶಿಂದೆ ನೇತೃತ್ವದ ಶಿವಸೇನೆ ಬಿಜೆಪಿಯೊಂದಿಗೆ ವಿಲೀನವಾಗಬೇಕು. 2019ರವರೆಗೂ ಶಿವಸೇನೆ ಸಂಘ ಪರಿವಾರದೊಂದಿಗೆ ಸೌಹಾರ್ಧಯುತ ಸಂಬಂಧವನ್ನು ಹೊಂದಿತ್ತು. 2019 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳುವ ವಿಚಾರದಲ್ಲಿ ಪಕ್ಷವು ಬಿಜೆಪಿಯೊಂದಿಗಿನ ಸಂಬಂಧವನ್ನು ಮುರಿದುಕೊಂಡಿತು. 2022ರ ಜೂನ್ನಲ್ಲಿ ಏಕನಾಥ ಶಿಂದೆ ಬಣ ಬಂಡಾಯವೆದ್ದ ಕಾರಣ ಶಿವಸೇನಾ ಪಕ್ಷ ಇಬ್ಭಾಗವಾಯಿತು. ಶಿಂದೆ ನೇತೃತ್ವದ ಬಣ ಬಿಜೆಪಿಯೊಂದಿಗೆ ಕೈಜೋಡಿಸಿ ರಾಜ್ಯದ ಮುಖ್ಯಮಂತ್ರಿಯಾದರು’ ಎಂದು ರಾವತ್ ಹೇಳಿದ್ದಾರೆ.

ಏಕನಾಥ ಶಿಂದೆ ಅವರು ಗುರುವಾರ ನಾಗ್ಪುರದಲ್ಲಿರುವ ಆರ್ಎಸ್ಎಸ್ ಸ್ಥಾಪಕ ಡಾ. ಕೆ.ಬಿ. ಹೆಡಗೇವಾರ್ ಅವರ ಸ್ಮಾರಕ್ಕ ಭೇಟಿ ನೀಡಿದ್ದ ವೇಳೆ, ‘ಆರ್ಎಸ್ಎಸ್ ಮತ್ತು ಶಿವಸೇನೆಯ ಆಲೋಚನೆಗಳು ಒಂದೇ ಆಗಿದೆ’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.