ಛತ್ರಪತಿ ಸಂಭಾಜಿನಗರ/ನಾಸಿಕ್: ಮರಾಠ ಮೀಸಲಾತಿ ಬೇಡಿಕೆಗೆ ಬೆಂಬಲಿಸಿ ಮುಖ್ಯಮಂತ್ರಿ ಏಕನಾಥ ಶಿಂದೆ ಅವರಿಗೆ ನಿಷ್ಠರಾದ, ಶಿವಸೇನೆಯ ಇಬ್ಬರು ಸಂಸದರು ರಾಜೀನಾಮೆಯನ್ನು ನೀಡಿದ್ದಾರೆ.
ಹಿಂಗೋಳಿ ಸಂಸದ ಹೇಮಂತ ಪಾಟೀಲ್ ನವದೆಹಲಿಯಲ್ಲಿ ಲೋಕಸಭೆಯ ಸಚಿವಾಲಯಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ್ದರೆ, ನಾಸಿಕ್ ಕ್ಷೇತ್ರದ ಸಂಸದ ಹೇಮಂತ್ ಗೋಡ್ಸೆ ಶಿಂಧೆ ಅವರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ.
ಸ್ಪೀಕರ್ ಅವರು ಕಚೇರಿಯಲ್ಲಿ ಇಲ್ಲದ್ದರಿಂದ ನಾನು ಅವರ ಕಾರ್ಯದರ್ಶಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದು, ಹಿಂಬರಹವನ್ನು ಪಡೆದಿದ್ದೇನೆ ಎಂದು ಪಾಟೀಲ್ ಅವರು ಮರಾಠಿ ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದರು.
ಯಾವತ್ಮಲ್‌ನಲ್ಲಿ ಪ್ರತಿಭಟನಕಾರರು ಸಂಸದರ ತಡೆದು ಹೋರಾಟ ಕುರಿತು ತಮ್ಮ ನಿಲುವು ಸ್ಪಷ್ಟಪಡಿಸಲು ಪಟ್ಟುಹಿಡಿದಿದ್ದರು. ಆಗ ಸ್ಥಳದಲ್ಲಿಯೇ ರಾಜೀನಾಮೆ ಪತ್ರವನ್ನು ಸಿದ್ಧಪಡಿಸಿ ಪ್ರತಿಭಟನಕಾರರಿಗೆ ನೀಡಿದ್ದರು.
ರಾಜೀನಾಮೆಯು ಒಂದು ನಾಟಕ ಎಂಬ ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಅವರ ಹೇಳಿಕೆಗೆ ಅವರು, ಮರಾಠರ ಬಗ್ಗೆ ಕಳಕಳಿಯುಳ್ಳ ನಾಯಕರು ರಾಜೀನಾಮೆ ನೀಡಬೇಕು ಎಂದು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.