ಮೊಗ: ಪಂಜಾಬ್ನ ಮೊಗದಲ್ಲಿ ಗುರುವಾರ ರಾತ್ರಿ ಶಿವಸೇನಾ ಶಿಂದೆ ಬಣಕ್ಕೆ ಸೇರಿದ ನಾಯಕರೊಬ್ಬರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಘಟನೆಯಲ್ಲಿ ಓರ್ವ ಬಾಲಕ ಗಾಯಗೊಂಡಿದ್ದಾನೆ.

ಏಕನಾಥ ಶಿಂದೆ ಬಣದ ಶಿವನಸೇನಾದ ಮೊಗ ಜಿಲ್ಲಾಧ್ಯಕ್ಷ ಮಂಗತ್ ರೈ ಅಲಿಯಾಸ್ ಮಂಗ (52) ಸಾವಿಗೀಡಾದವರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
.ಉತ್ತರ ಪ್ರದೇಶ: ಗುಂಡಿಕ್ಕಿ ಪತ್ರಕರ್ತನ ಹತ್ಯೆ.
ರಾತ್ರಿ ಸುಮಾರು 10 ಗಂಟೆ ವೇಳೆಗೆ ಹಾಲು ಖರೀದಿಗೆಂದು ಮಂಗ ಅವರು ಮನೆಯಿಂದ ಹೊರಗೆ ಬಂದಿದ್ದರು. ಈ ವೇಳೆ ಮೂವರು ಅಪರಿಚಿತರು ದಾಳಿ ನಡೆಸಿದ್ದಾರೆ. ಮೊದಲು ಹಾರಿಸಿದ ಗುಂಡು ಮಂಗ ಅವರಿಗ ಬದಲಾಗಿ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ 12 ವರ್ಷದ ಬಾಲಕನಿಗೆ ತಗುಲಿದೆ.

ಕೂಡಲೇ ಮಂಗ ದ್ವಿಚಕ್ರ ವಾಹನ ಏರಿ ಸ್ಥಳದಿಂದ ಪರಾರಿಯಾಗಿದ್ದಾರೆ. ಬೆನ್ನತ್ತಿ ಹೊಂದ ಹಂತಕರು ಮತ್ತೊಮ್ಮೆ ಹಾರಿಸಿದ ಗುಂಡು ಮಂಗ ಅವರಿಗೆ ತಗಿಲಿದೆ. ತಕ್ಷಣವೇ ಸ್ಥಳದಿಂದ ಪರಾರಿಯಾಗಿದ್ದಾರೆ.
.ಪಾಕ್ ನುಸುಳುಕೋರನನ್ನು ಗುಂಡಿಕ್ಕಿ ಕೊಂದ ಬಿಎಸ್ಎಫ್.
ಮಂಗ ಅವರನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸಿದ್ದು, ಆದರೆ ದಾರಿ ಮಧ್ಯೆ ಮೃತಪಟ್ಟಿದ್ದಾಗಿ ವೈದ್ಯರು ಹೇಳಿದ್ದಾರೆ. ಗಾಯಗೊಂಡಿರುವ ಬಾಲಕನನ್ನು ಮೊಗ ನಾಗರಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಇನ್ನೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗ ಅವರ ಪತ್ನಿ ನೀಡಿದ ದೂರನ ಅನ್ವಯ 6 ಮಂದಿ ಹಾಗೂ ಕೆಲ ಅಪರಿಚಿತರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ತನಿಖೆ ಪ್ರಗತಿಯಲ್ಲಿದೆ.
.ಹರಿಯಾಣ: ಬಿಎಸ್ಪಿ ನಾಯಕನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು.
ವೈಯಕ್ತಿಕ ದ್ವೇಷದಿಂದ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಮಂಗ ಅವರು ಯಾರೊಂದಿಗೂ ದ್ವೇಷ ಕಟ್ಟಿಕೊಂಡಿರಲಿಲ್ಲ ಎನ್ನುವುದು ಅವರ ಕುಟುಂಬಸ್ಥರ ಸಮರ್ಥನೆ.

ಘಟನೆಯನ್ನು ಖಂಡಿಸಿ ಕೆಲವು ಸಂಘಟನೆಗಳು ಹಾಗೂ ಕುಟುಂಬದ ಸದಸ್ಯರು ಮೊಗದ ಪ್ರತಾಪ್ ಚೌಕ್ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯದ ಎಎಪಿ ಸರ್ಕಾರವನ್ನು ದೂಷಿಸಿದ ಅವರು, ಪಂಜಾಬ್ನಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಕಿಡಿ ಕಾರಿದ್ದಾರೆ.
.ಸುಳ್ಯ: ಗುಂಡಿಕ್ಕಿ ಪತ್ನಿ ಕೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.