ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಮ್ಲಾ | ಬಾಲಕಿಯರಿಗೆ ಕಿರುಕುಳ: ಅಂಗಡಿ ಮಾಲೀಕ ಬಂಧನ

Published 20 ಜೂನ್ 2024, 14:48 IST
Last Updated 20 ಜೂನ್ 2024, 14:48 IST
ಅಕ್ಷರ ಗಾತ್ರ

ಶಿಮ್ಲಾ: ಹನ್ನೊಂದು ಮಂದಿ ಬಾಲಕಿಯರು ಇಲ್ಲಿನ ಅಂಗಡಿ ಮಾಲೀಕ ಸತ್ಯಪ್ರಕಾಶ್ ತಮ್ಮನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ, ತಮಗೆ ಕಿರುಕುಳ ನೀಡಿದ್ದಾನೆ ಎಂದು ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ಪೊಲೀಸರು ಈತನನ್ನು ಲೈಂಗಿಕ ಹಲ್ಲೆ ಆರೋಪದ ಅಡಿಯಲ್ಲಿ ಬಂಧಿಸಿದ್ದಾರೆ.

ದೂರು ನೀಡಿರುವ ಬಾಲಕಿಯರೆಲ್ಲ ಶಾಲಾ ವಿದ್ಯಾರ್ಥಿಗಳು. ತಾವು ಏನಾದರೂ ಖರೀದಿಸಲು ಚೋಪಾಲ್‌ನಲ್ಲಿ ಇರುವ ಈ ಅಂಗಡಿಗೆ ಹೋದಾಗಲೆಲ್ಲ ಅಂಗಡಿ ಮಾಲೀಕ ತಮಗೆ ಕಿರುಕುಳ ನೀಡುತ್ತಿದ್ದ ಎಂದು ಬಾಲಕಿಯರು ಆರೋಪಿಸಿದ್ದರು. ಬಾಲಕಿಯರು ಹೇಳಿದ್ದನ್ನು ಪರಿಗಣಿಸಿ, ಬಾಲಕಿಯರು ಓದುತ್ತಿರುವ ಶಾಲೆಯ ಪ್ರತಿನಿಧಿಗಳು ದೂರು ದಾಖಲಿಸಿದರು.

ಸತ್ಯಪ್ರಕಾಶ್ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್ 8ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಶಿಮ್ಲಾ ಎಸ್‌ಪಿ ಸಂಜೀವ್ ಕುಮಾರ್ ಗಾಂಧಿ ತಿಳಿಸಿದ್ದಾರೆ.

ದೂರು ದಾಖಲಾಗಿರುವುದು ಗೊತ್ತಾಗುತ್ತಿದ್ದಂತೆ ಆರೋಪಿ ಚೋಪಾಲ್‌ನಿಂದ ಪರಾರಿಯಾಗಿದ್ದ. ನಂತರ ಆತನನ್ನು ಘಣಾಹಟ್ಟಿಯಲ್ಲಿ ಬಂಧಿಸಲಾಯಿತು. ಈತ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಅಪರಾಧಿ ಎಂದು ಘೋಷಿಸಲಾಗಿತ್ತು ಎಂದು ಸಂಜೀವ್ ಕುಮಾರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT