ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫನ್ ರನ್ ಓಟದಲ್ಲಿ ಸಿಕ್ಕಿಂ ಮುಖ್ಯಮಂತ್ರಿ ಭಾಗಿ

Published 18 ಫೆಬ್ರುವರಿ 2024, 13:12 IST
Last Updated 18 ಫೆಬ್ರುವರಿ 2024, 13:12 IST
ಅಕ್ಷರ ಗಾತ್ರ

ಗ್ಯಾಂಗ್ಟಕ್: ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಂಗ್ ಹಾಗೂ ಅವರ ಸಂಪುಟ ಸಹೋದ್ಯೋಗಿಗಳು ಗ್ಯಾಂಗ್ಟಕ್ ಸ್ಮಾರ್ಟ್ ಸಿಟಿ ಅಭಿವೃದ್ಧಿ ಲಿ.  ಭಾನುವಾರ ಆಯೋಜಿಸಿದ 2 ಕಿ.ಮೀ. ‘ಫನ್ ರನ್’ ಓಟದಲ್ಲಿ ಭಾಗವಹಿಸಿದರು. 

ಗ್ಯಾಂಗ್ಟಕ್‌ನಲ್ಲಿ ನಿರ್ಮಿಸಲಾದ ಬಹುಹಂತದ ಪಾರ್ಕಿಂಗ್ ಸಮುಚ್ಚಯದ ಉದ್ಘಾಟನಾ ಸಮಾರಂಭದ ಭಾಗವಾಗಿ ಆಯೋಜಿಸಲಾದ ‘ವೆಸ್ಟ್ ಪಾಯಿಂಟ್ ಸಾರಥಿ’ ಓಟದಲ್ಲಿ ರೂಪದರ್ಶಿ ಮಿಲಿಂದ್ ಸೋಮನ್ ಸೇರಿದಂತೆ ಸುಮಾರು 1,800 ಮಂದಿ ಭಾಗವಹಿಸಿದ್ದರು. 

ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ತಮಂಗ್, ‘ಗ್ಯಾಂಗ್ಟಕ್‌ನಲ್ಲಿ ಆಯೋಜಿಸಲಾಗಿರುವ ಸಿಕ್ಕಿಂ ಸಾರಥಿ ರನ್‌ನಲ್ಲಿ ಭಾಗಿಯಾಗಿರುವುದು ನಿಜಕ್ಕೂ ಸಂತೋಷ ತಂದಿದೆ. ಎಲ್ಲ ವಯೋಮಾನದ ಜನರು ಈ ಓಟದಲ್ಲಿ ಭಾಗವಹಿಸಿದ್ದಾರೆ. ಭಾಗವಹಿಸಿದವರೆಲ್ಲರಿಗೆ ಮತ್ತು ಗೆದ್ದವರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT