ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾ: ಸಿಡಿಲು ಬಡಿದು ರನ್‌ವೇಗೆ ಹಾನಿ; 6 ವಿಮಾನಗಳ ಮಾರ್ಗ ಬದಲಾವಣೆ

Published 23 ಮೇ 2024, 4:50 IST
Last Updated 23 ಮೇ 2024, 4:50 IST
ಅಕ್ಷರ ಗಾತ್ರ

ಪಣಜಿ: ಗೋವಾದ ಮನೋಹರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ(ಎಂಐಎ) ರನ್‌ವೇ ಎಡ್ಜ್ ಲೈಟ್‌ಗಳಿಗೆ ಸಿಡಿಲು ಬಡಿದು ಹಾನಿಯಾಗಿರುವ ಹಿನ್ನೆಲೆಯಲ್ಲಿ ಅಲ್ಲಿ ಇಳಿಯಬೇಕಿದ್ದ 6 ವಿಮಾನಗಳ ಮಾರ್ಗ ಬದಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಗೋವಾದ ಮೊಪಾದಲ್ಲಿರುವ ವಿಮಾನ ನಿಲ್ದಾಣಕ್ಕೆ ಬುಧವಾರ ಸಂಜೆ 5.15ರ ಸುಮಾರಿಗೆ ಸಿಡಿಲು ಬಡಿದಿದೆ ಎಂದು ಎಂಐಎ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ರನ್‌ವೇ ಹಾನಿಯಾಗಿರುವ ಬಗ್ಗೆ ರಾತ್ರಿ 8 ಗಂಟೆ ಸುಮಾರಿಗೆ ಗಮನಕ್ಕೆ ಬಂದಿತು. 6 ವಿಮಾನಗಳ ಮಾರ್ಗ ಬದಲಿಸಲಾಗಿದ್ದು, ಬಳಿಕ, ಸಮಸ್ಯೆ ಬಗೆಹರಿಸಿ ವಿಮಾನನಿಲ್ದಾಣದ ಸುಗಮ ಕಾರ್ಯಾಚರಣೆಗೆ ಅನುವು ಮಾಡಿಕೊಡಲಾಗಿದೆ’ ಎಂದು ಪ್ರಕಟಣೆ ತಿಳಿಸಿದೆ.

‘ಇದರಿಂದ ಪ್ರಯಾಣಿಕರಿಗೆ ತೊಂದರೆ ಆಗಿರುವ ಕುರಿತಂತೆ ವಿಷಾದಿಸುತ್ತೇವೆ. ಈ ರೀತಿಯ ಪ್ರಾಕೃತಿಕ ವಿಕೋಪದ ಮನುಷ್ಯರ ಕೈ ಮೀರಿದ್ದಾಗಿದೆ’ ಎಂದು ಅದು ಹೇಳಿದೆ.

ಎಂಐಎ ಜೊತೆಗೆ ದಕ್ಷಿಣ ಗೋವಾದಲ್ಲಿ ದಬೊಲಿಮ್‌ನಲ್ಲಿ ಮತ್ತೊಂದು ವಿಮಾನ ನಿಲ್ದಾಣ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT