ಶ್ರೀನಗರ: ಜಮ್ಮು–ಕಾಶ್ಮೀರದ ಕಿಸ್ತವಾರ್ ಜಿಲ್ಲೆ ಚಾತ್ರೂ ಪ್ರದೇಶದಲ್ಲಿ ಉಗ್ರರೊಂದಿಗೆ ಶುಕ್ರವಾರ ನಡೆದ ಗುಂಡಿನ ಚಕಮಕಿಯಲ್ಲಿ ಜೂನಿಯರ್ ಕಮಿಷನ್ಡ್ ಅಧಿಕಾರಿ (ಜೆಸಿಒ) ಸೇರಿ ಸೇನೆಯ ಇಬ್ಬರು ಸಿಬ್ಬಂದಿ ಹುತಾತ್ಮರಾಗಿದ್ದು, ಇತರ ಇಬ್ಬರು ಗಾಯಗೊಂಡಿದ್ದಾರೆ.
ಜೆಸಿಒ ನಾಯಬ್ ಸುಬೇದಾರ್ ವಿಪನ್ ಕುಮಾರ್ ಹಾಗೂ ಸಿಪಾಯಿ ಅರವಿಂದ ಸಿಂಗ್ ಹುತಾತ್ಮರಾದವರು.
‘ಗುಪ್ತಚರ ಮಾಹಿತಿ ಮೇರೆಗೆ, ಜಮ್ಮು–ಕಾಶ್ಮೀರ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ಆರಂಭಿಸಲಾಯಿತು. ಈ ವೇಳೆ, ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಗಾಯಗೊಂಡ ನಾಲ್ವರು ಯೋಧರನ್ನು ಸಮೀಪದ ಕಮಾಂಡ್ ಆಸ್ಪತ್ರೆಗೆ ದಾಖಲಿಸಲಾಯಿತು. ಗಾಯಗಳಿಂದಾಗಿ ಇಬ್ಬರು ಮೃತಪಟ್ಟರು’ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.