ನವದೆಹಲಿ: ಮತ ಕಳವು ಆರೋಪ ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ಬುಧವಾರ ಮುಗಿಬಿದ್ದಿರುವ ಬಿಜೆಪಿ, ‘ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭಾರತೀಯ ಪ್ರಜೆಯಾಗುವುದಕ್ಕೂ ಮುನ್ನವೇ ಮತದಾರರಾಗಿ ನೋಂದಾಯಿಸಿಕೊಂಡಿದ್ದರು’ ಎಂದು ಆರೋಪ ಮಾಡಿದೆ.

‘ದೇಶದ ಪೌರತ್ವ ಪಡೆಯುವುದಕ್ಕೂ ಮುನ್ನವೇ, ಅಂದರೆ ಇಟಲಿ ಪೌರತ್ವ ಹೊಂದಿದ್ದಾಗಲೇ ಭಾರತದ ಮತದಾರರ ಪಟ್ಟಿಯಲ್ಲಿ ಸೇರುವುದು ಎಂದರೆ ಅದು ಚುನಾವಣಾ ಕಾನೂನಿನ ಸ್ಪಷ್ಟ ಉಲ್ಲಂಘನೆ’ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ‘ಎಕ್ಸ್’ನಲ್ಲಿ ಹೇಳಿದ್ದಾರೆ.

‘ಸೋನಿಯಾ ಗಾಂಧಿ ಅವರು ಭಾರತದ ಪೌರತ್ವ ಪಡೆಯುವುದಕ್ಕೂ ಮುನ್ನವೇ, ಅಂದರೆ 1980ರ ಜನವರಿ 1ರಲ್ಲಿ ಅವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಇದಕ್ಕೆ ಆಗ ತೀವ್ರ ಆಕ್ರೋಶ ವ್ಯಕ್ತವಾದಾಗ 1982ರಲ್ಲಿ ಹೆಸರನ್ನು ತೆಗೆಯಲಾಗಿತ್ತು. ನಂತರ ಅವರ ಹೆಸರು 1983ರಲ್ಲಿ ನೋಂದಣಿಯಾಯಿತು. ಅದೂ ಕೂಡ ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಏಕೆಂದರೆ ನೋಂದಣಿಗೆ ಅರ್ಹತಾ ದಿನಾಂಕ 1983ರ ಜನವರಿ 1 ಆಗಿತ್ತು. ಆದರೆ ಸೋನಿಯಾ ಗಾಂಧಿ ಅವರಿಗೆ ಭಾರತದ ಪೌರತ್ವ ದೊರೆತದ್ದು 1983ರ ಏಪ್ರಿಲ್ 30ರಂದು. ಅಲ್ಲಿಯವರೆಗೂ ಅವರು ಇಟಲಿಯ ಪೌರತ್ವವನ್ನೇ ಹೊಂದಿದ್ದರು’ ಎಂದು ಅವರು ವಿವರಿಸಿದ್ದಾರೆ.

‘ಮೂಲಭೂತವಾಗಿ ಪೌರತ್ವದ ಅವಶ್ಯಕತೆಗಳನ್ನೇ ಪೂರೈಸದೇ ಸೋನಿಯಾ ಅವರ ಹೆಸರು ಎರಡು ಬಾರಿ ಮತದಾರರ ಪಟ್ಟಿ ಪ್ರವೇಶಿಸಿದ್ದು ಹೇಗೆ? ಇದು ಚುನಾವಣಾ ಅಕ್ರಮವಲ್ಲವೇ’ ಎಂದು ಅವರು ಪ್ರಶ್ನಿಸಿದ್ದಾರೆ.

‘ಸೋನಿಯಾ ಅವರು ರಾಜೀವ್ ಗಾಂಧಿ ಅವರನ್ನು ವಿವಾಹವಾದ 15 ವರ್ಷಗಳ ಬಳಿಕ ಭಾರತದ ಪೌರತ್ವವನ್ನು ಏಕೆ ಪಡೆದರು ಎಂಬುದನ್ನು ನಾವು ಕೇಳುವುದಿಲ್ಲ’ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.