ನವದೆಹಲಿ: ಆನ್ಲೈನ್ ಬೆಟ್ಟಿಂಗ್ ಆ್ಯಪ್ 1ಎಕ್ಸ್ಬೆಟ್ಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನಟ ಸೋನು ಸೂದ್ ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳ ಮುಂದೆ ಇಂದು ವಿಚಾರಣೆಗೆ ಹಾಜರಾದರು.

ಮಧ್ಯಾಹ್ನ 12ರ ಸುಮಾರಿಗೆ 52 ವರ್ಷದ ಸೋನು ಸೂದ್ ಇ.ಡಿ ಕಚೇರಿಗೆ ವಿಚಾರಣೆಗೆ ಹಾಜರಾದರು.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್ಎ) ಅಡಿ ತನಿಖಾಧಿಕಾರಿ ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ.

ಈ ತನಿಖೆಯ ಭಾಗವಾಗಿ ತನಿಖಾ ಸಂಸ್ಥೆಯು ಕಳೆದ ಕೆಲವು ವಾರಗಳಲ್ಲಿ ಮಾಜಿ ಕ್ರಿಕೆಟಿಗರಾದ ಸುರೇಶ್ ರೈನಾ, ಶಿಖರ್ ಧವನ್, ರಾಬಿನ್ ಉತ್ತಪ್ಪ ಮತ್ತು ಯುವರಾಜ್ ಸಿಂಗ್ ಅವರನ್ನು ವಿಚಾರಣೆಗೆ ಒಳಪಡಿಸಿದೆ. ಟಿಎಂಸಿಯ ಮಾಜಿ ಸಂಸದೆ ಮತ್ತು ನಟಿ ಮಿಮಿ ಚಕ್ರವರ್ತಿ ಮತ್ತು ಬಂಗಾಳಿ ನಟ ಅಂಕುಶ್ ಹಜ್ರಾ ಅವರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.

ಈ ತನಿಖೆಯ ಭಾಗವಾಗಿ ಕೆಲವು ಮಹಿಳಾ ಸಾಮಾಜಿಕ ಮಾಧ್ಯಮ ಇನ್ಫ್ಲುಯೆನ್ಸರ್ಗಳನ್ನೂ ಸಂಸ್ಥೆ ಪ್ರಶ್ನಿಸಿದೆ.

ಹಲವಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಮತ್ತು ಬೃಹತ್ ಪ್ರಮಾಣದ ನೇರ ಹಾಗೂ ಪರೋಕ್ಷ ತೆರಿಗೆಗಳನ್ನು ವಂಚಿಸಿದ ಆರೋಪದ ಮೇಲೆ ಹಲವು ಆನ್ಲೈನ್ ಆ್ಯಪ್ಗಳ ವಿರುದ್ಧದ ತನಿಖೆಯ ಭಾಗವಾಗಿ ಇ.ಡಿ 1xBet ಬೆಟ್ಟಿಂಗ್ ಅಪ್ಲಿಕೇಶನ್ ವಂಚನೆಯ ಕುರಿತು ತನಿಖೆ ನಡೆಸುತ್ತಿದೆ.

ಕ್ರೀಡಾ ಕ್ಷೇತ್ರದ ಮತ್ತಷ್ಟು ಮಂದಿ, ನಟರು, ಆನ್ಲೈನ್ ಇನ್ಫ್ಲುಯೆನ್ಸರ್ಗಳು, ವಿಚಾರಣೆಗೆ ಹಾಜರಾಗುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.