ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇನ್‌–ಸ್ಪೇಸ್‌ಗೆ ಜಿಯೊಸ್ಪೇಷಿಯಲ್‌ ಪ್ರಶಸ್ತಿ

Published 15 ಮೇ 2024, 15:19 IST
Last Updated 15 ಮೇ 2024, 15:19 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಬಾಹ್ಯಾಕಾಶ ನಿಯಂತ್ರಕ ‘ಇನ್‌– ಸ್ಪೇಸ್‌’ಗೆ ‘ಸಾರ್ವಜನಿಕ ನೀತಿ: ಸಕ್ರಿಯ ಉದ್ಯಮ ಅಭಿವೃದ್ಧಿ’ಗಾಗಿ ಜಿಯೊಸ್ಪೇಷಿಯಲ್‌ ವರ್ಲ್ಡ್‌ ಫೋರಂ (ಜಿಡಬ್ಲುಎಫ್‌) ನಾಯಕತ್ವ ಪ್ರಶಸ್ತಿಯನ್ನು ನೀಡಲಾಯಿತು.

ರೋಟರ್‌ಡ್ಯಾಮ್‌ನಲ್ಲಿ ಮಂಗಳವಾರ ನಡೆದ ‘2024 ಜಿಯೋಸ್ಪೇಷಿಯಲ್‌ ವರ್ಲ್ಡ್‌ ಫೋರಂ’ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. 

ಭಾರತದ ಬಾಹ್ಯಾಕಾಶ ಕ್ಷೇತ್ರದ ಅಭಿವೃದ್ಧಿಯನ್ನು ಉತ್ತೇಜಿಸುವ, ಬಾಹ್ಯಾಕಾಶ ಆರ್ಥಿಕತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರೇತರ ಸಂಸ್ಥೆಗಳಿಗೆ ಬೆಂಬಲ ನೀಡುವ ಮೂಲಕ ಜಾಗತಿಕ ಭೂಗೋಳದ ಉದ್ಯಮಕ್ಕೆ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಕೊಡುಗೆಗಳನ್ನು ನೀಡುತ್ತಿರುವವರನ್ನು ಈ ಪ್ರಶಸ್ತಿಯು ಗುರುತಿಸುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT