ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ಸುಬ್ರೊತೊ ಕಪ್‌ ಇಂದಿನಿಂದ

Published 30 ಸೆಪ್ಟೆಂಬರ್ 2023, 14:12 IST
Last Updated 30 ಸೆಪ್ಟೆಂಬರ್ 2023, 14:12 IST
ಅಕ್ಷರ ಗಾತ್ರ

ಬೆಂಗಳೂರು: ಸಬ್‌ ಜೂನಿಯರ್‌ ಬಾಲಕರ ವಿಭಾಗದ 62ನೇ ಸುಬ್ರೊತೊ ಕಪ್‌ ಅಂತರರಾಷ್ಟ್ರೀಯ ಫುಟ್‌ಬಾಲ್‌ ಟೂರ್ನಿ ಬೆಂಗಳೂರಿನಲ್ಲಿ ಭಾನುವಾರ ಆರಂಭವಾಗಲಿದೆ.

14 ವರ್ಷದೊಳಗಿನ ಬಾಲಕರಿಗಾಗಿ ಆಯೋಜಿಸಲಾಗುವ ಈ ಅಂತರ ಶಾಲಾ ಟೂರ್ನಿ ದೆಹಲಿಯ ಹೊರಗೆ ನಡೆಯುತ್ತಿರುವುದು ಇದೇ ಮೊದಲು. 

ಒಟ್ಟು 37 ತಂಡಗಳನ್ನು ಎಂಟು ಗುಂಪುಗಳನ್ನಾಗಿ ವಿಂಗಡಿಸಿ ಲೀಗ್‌ ಹಂತದ ಪಂದ್ಯಗಳನ್ನು ಆಡಿಸಲಾಗುತ್ತದೆ. ಪ್ರತಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡ, ನಾಕೌಟ್‌ಗೆ ಪ್ರವೇಶಿಸಲಿದೆ.

ಲೀಗ್ ಪಂದ್ಯಗಳು ಜಾಲಹಳ್ಳಿ ಮತ್ತು ಯಲಹಂಕದ ಏರ್‌ಫೋರ್ಸ್‌ ಸ್ಕೂಲ್, ಏರ್‌ ಫೋರ್ಸ್‌ ಟ್ರೈನಿಂಗ್ ಕಮಾಂಡ್‌ ಮೈದಾನಗಳಲ್ಲಿ ನಡೆಯಲಿವೆ. ನಾಕೌಟ್‌ ಪಂದ್ಯಗಳನ್ನು ಎಎಸ್‌ಸಿ ಸೆಂಟರ್‌ ಮೈದಾನದಲ್ಲಿ ನಡೆಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT