ಮುಂಬೈ: ಮುಂಬೈನ ಬಾಂದ್ರಾ ಪ್ರದೇಶದ ಗ್ಯಾಲಕ್ಸಿ ಥಿಯೇಟರ್ನಲ್ಲಿ ಗುರುವಾರ ಸಂಜೆ ಪ್ರೇಕ್ಷಕರಿಗೆ ಕೆಮ್ಮು, ವಾಂತಿ ಮತ್ತು ಗಂಟಲು ಕಿರಿಕಿರಿಯುಂಟಾದ ಕಾರಣ ‘ಪುಷ್ಪ 2: ದಿ ರೂಲ್’ ಚಲನಚಿತ್ರ ಪ್ರದರ್ಶನವನ್ನು 10-15 ನಿಮಿಷ ಸ್ಥಗಿತಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಪ್ರೇಕ್ಷಕರ ಪೈಕಿ ಒಬ್ಬರು ಸ್ಪ್ರೇ ಅನ್ನು ಸಿಂಪಡಿಸಿದ ಬಳಿಕ ಸಮಸ್ಯೆ ಉಂಟಾಗಿದೆ ಎಂದು ಆರೋಪವಿದೆ. ಪ್ರೇಕ್ಷಕರು ಥಿಯೇಟರ್ ಆಡಳಿತ ಮಂಡಳಿಗೆ ಎಚ್ಚರಿಸಿದ ಬಳಿಕ ಅವರು ಬಾಂದ್ರಾ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ನಂತರ ಪೊಲೀಸರು, ಚಿತ್ರ ಪ್ರದರ್ಶನವನ್ನು 10-15 ನಿಮಿಷ ಸ್ಥಗಿತಗೊಳಿಸಿ, ಥಿಯೇಟರ್ ಒಳಗಿದ್ದ ಪ್ರೇಕ್ಷಕರನ್ನು ತಪಾಸಣೆ ನಡೆಸಿದ್ದಾರೆ. ಆದರೆ ಘಟನೆಗೆ ಕಾರಣವಾಗಬಹುದಾದ ಯಾವುದೇ ವಸ್ತುಗಳು ಲಭ್ಯವಾಗಿಲ್ಲ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿಲ್ಲ. ಆದರೆ, ತನಿಖೆ ಮುಂದುವರೆದಿದೆ ಎಂದು ಬಾಂದ್ರಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.