ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳದಲ್ಲಿ ಬಿರುಗಾಳಿ ಮಳೆ: ಮೂರು ರಾತ್ರಿ ನಿದ್ದೆ ಮಾಡದ ನಿರಾಶ್ರಿತರು

Published 3 ಏಪ್ರಿಲ್ 2024, 14:15 IST
Last Updated 3 ಏಪ್ರಿಲ್ 2024, 14:15 IST
ಅಕ್ಷರ ಗಾತ್ರ

ಜಲಪಾಈಗುಡಿ: ಪಶ್ಚಿಮ ಬಂಗಾಳದ ಜಲಪಾಈಗುಡಿ ಜಿಲ್ಲೆಯಲ್ಲಿ ಕೆಲವೆಡೆ ಸುರಿದ ಬಿರುಗಾಳಿ ಸಹಿತ ಮಳೆಯಿಂದ ಆತಂಕಗೊಂಡಿರುವ ಇಲ್ಲಿನ ನಿವಾಸಿಗಳು ಮೂರು ರಾತ್ರಿಗಳಿಂದ ನಿದ್ದೆಯಿಲ್ಲದೆ ಹೊರಾಂಗಣದಲ್ಲಿ ಕಳೆದಿದ್ದಾರೆ. ಅಲ್ಲದೆ ಪರಿಹಾರ ಸಾಮಗ್ರಿ ಸರಿಯಾಗಿ ತಮ್ಮನ್ನು ತಲುಪುತ್ತಿಲ್ಲ ಎಂದೂ ದೂರಿದ್ದಾರೆ.

ಬಿರುಗಾಳಿ ಮಳೆಯು ಐವರನ್ನು ಬಲಿ ತೆಗೆದುಕೊಂಡಿದ್ದು, 200ಕ್ಕೂ ಹೆಚ್ಚು ಜನರನ್ನು ನಿರಾಶ್ರಿತರನ್ನಾಗಿಸಿದೆ. 

ಪರಿಹಾರ ಸಾಮಗ್ರಿಗಳನ್ನು ಸರಿಯಾಗಿ ವಿತರಿಸಲಾಗಿಲ್ಲ. ಕುಡಿಯುವ ನೀರಿನ ಕೊರತೆ, ಶಿಶುಗಳಿಗೆ ಆಹಾರದ ಸಮಸ್ಯೆ ತೀವ್ರವಾಗಿದೆ ಎಂದು ನಿರಾಶ್ರಿತರು ಅಳಲು ತೋಡಿಕೊಂಡಿದ್ದಾರೆ. ಆದರೆ, ಪರಿಹಾರ ಸಾಮಗ್ರಿಗಳ ಕೊರತೆಯಿಲ್ಲ. ಬಿಕ್ಕಟ್ಟನ್ನು ಎದುರಿಸಲು ಸರ್ಕಾರ ಶ್ರಮಿಸುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT