ನವದೆಹಲಿ: ಇರಾನ್–ಇಸ್ರೇಲ್ ನಡುವಿನ ಉದ್ವಿಗ್ನತೆ ಬೆನ್ನಲ್ಲೇ ಲಂಡನ್–ಬೆಂಗಳೂರು ವಿಮಾನ ಸೇರಿದಂತೆ ಏರ್ ಇಂಡಿಯಾದ 16 ವಿಮಾನಗಳ ಹಾರಾಟದ ಮಾರ್ಗವನ್ನು ಬದಲಾಯಿಸಲಾಯಿತು.

ಲಂಡನ್ನ ಹೀಥ್ರೂ– ಬೆಂಗಳೂರು ಮಾರ್ಗದ ಏರ್ ಇಂಡಿಯಾ ವಿಮಾನವನ್ನು ಶಾರ್ಜಾಕ್ಕೆ ಕಳುಹಿಸಲಾಯಿತು. ಲಂಡನ್, ನ್ಯೂಯಾರ್ಕ್, ವಾಷಿಂಗ್ಟನ್, ನೇವಾರ್ಕ್ ಮತ್ತು ಟೊರೊಂಟೊಕ್ಕೆ ತೆರಳಿದ್ದ 16 ವಿಮಾನಗಳ ಪೈಕಿ ಐದು ವಿಮಾನಗಳನ್ನು ಮುಂಬೈ, ದೆಹಲಿಗೆ ಕಳುಹಿಸಲಾಯಿತು.

‘ಇರಾನ್ ಹಾಗೂ ಇಸ್ರೇಲ್ ನಡುವೆ ಏರ್ಪಟ್ಟಿರುವ ಸಂಘರ್ಷದಿಂದ ವಾಯುಮಾರ್ಗ ಮುಚ್ಚಿದ್ದರಿಂದ ವಿಮಾನಗಳ ಹಾರಾಟದ ಮಾರ್ಗವನ್ನು ಬದಲಾಯಿಸಲಾಯಿತು ಹಾಗೂ ಮೂಲ ಸ್ಥಾನಕ್ಕೆ ವಿಮಾನಗಳನ್ನು ಕಳುಹಿಸಲಾಯಿತು’ ಎಂದು ಏರ್ ಇಂಡಿಯಾ ಹೇಳಿದೆ.

ದೆಹಲಿ– ಇಸ್ತಾಂಬುಲ್ ಹಾಗೂ ಮುಂಬೈ– ಇಸ್ತಾಂಬುಲ್ಗೆ ತೆರಳುತ್ತಿದ್ದ ಇಂಡಿಗೊದ ಎರಡು ವಿಮಾನಗಳ ಹಾರಾಟದ ಮೇಲೂ ಪರಿಣಾಮ ಬೀರಿದ್ದು, ಬೇರೆ ಮಾರ್ಗದ ಮೂಲಕ ಹಾರಾಟ ನಡೆಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.